ಚನ್ನಗಿರಿ: ತಾಲ್ಲೂಕು ತಾವರೆಕೆರೆ ಗ್ರಾಮದ ಅಂತರರಾಷ್ಟ್ರೀಯ ಹಿರಿಯ ಕ್ರೀಡಾಪಟು ಎನ್.ಎಸ್.ನಾಗರಾಜ್ ರಾವ್ ಈಚೆಗೆ ಹೈದರಾಬಾದ್‌ನಲ್ಲಿ ಪಾನ್ ಇಂಡಿಯಾ ಮಾಸ್ಟರ್ ಗೇಮ್ಸ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ 1ನೇ ಫೆಡರೇಷನ್ ಕಪ್ ನ್ಯಾಶನಲ್ ಮಾಸ್ಟರ್ ಗೇಮ್ಸ್ ಅಥ್ಲೆಟಿಕ್ಸ್ 75 ವರ್ಷದ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿ 1 ಚಿನ್ನ ಹಾಗೂ 2 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಹೈಜಂಪ್ ಪ್ರಥಮ ಸ್ಥಾನ, ಜಾವೆಲಿನ್ ಥ್ರೋ ದ್ವಿತೀಯ ಹಾಗೂ ಲಾಂಗ್ ಜಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

‘ನಾನು ಕೃಷಿಕನಾಗಿದ್ದು ಕ್ರೀಡೆಯೆಂದರೆ ಬಹಳ ಆಸಕ್ತಿ. ಕ್ರೀಡೆಗಳಲ್ಲಿ ಭಾಗವಹಿಸುವುದು ಹವ್ಯಾಸ. ರಾಷ್ಟ್ರ, ರಾಜ್ಯ ಮಟ್ಟದ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿ ಹಲವಾರು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದೇನೆ. ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆದಕೊಂಡಿದ್ದೇನೆ. ಯಾವ ಪ್ರಾಯೋಜಕರ ಸಹಾಯವೂ ಇಲ್ಲದೇ ಸ್ವಂತ ಖರ್ಚಿನಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲುತ್ತಿದ್ದೇನೆ’ ಎಂದು ಹಿರಿಯ ಕ್ರೀಡಾಪಟು ಎನ್.ಎಸ್. ನಾಗರಾಜ್ ರಾವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.