ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಪಿ. ರೇಣುಕಾಚಾರ್ಯ ಮನವೊಲಿಕೆ ಯತ್ನ ವಿಫಲ

Published 18 ಮಾರ್ಚ್ 2024, 20:14 IST
Last Updated 18 ಮಾರ್ಚ್ 2024, 20:14 IST
ಅಕ್ಷರ ಗಾತ್ರ

ಹೊನ್ನಾಳಿ (ದಾವಣಗೆರೆ): ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಅನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ಮನವೊಲಿಕೆಗೆ ಸೋಮವಾರ ಪಟ್ಟಣಕ್ಕೆ ಬಂದಿದ್ದ ಮಾಜಿ ಸಚಿವ ಮುರುಗೇಶ್‌ ನಿರಾಣಿ ಸಂಧಾನ ಸಾಧ್ಯವಾಗದೆ ಮರಳಿದರು. 

ವಿಧಾನಪರಿಷತ್‌ ಸದಸ್ಯ ಎನ್.ರವಿಕುಮಾರ್ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಅವರೊಂದಿಗೆ  ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ್ದ ನಿರಾಣಿ, ಕೆಲಹೊತ್ತು ನಡೆಸಿದ ಚರ್ಚೆ ಫಲಪ್ರದ ಆಗಲಿಲ್ಲ.

‘ಪಕ್ಷದ ಅಭ್ಯರ್ಥಿಗೆ ಬೆಂಬಲವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲಿಸುವಂತೆ ರೇಣುಕಾಚಾರ್ಯ ಹಾಗೂ ಅವರ ತಂಡದ ಸದಸ್ಯರಲ್ಲಿ ಮನವಿ ಮಾಡಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಪಕ್ಷದ ವೇದಿಕೆಯಲ್ಲಿ ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳೋಣ. ಈ ಬಾರಿ ಗಾಯತ್ರಿ ಅವರ ಪರ ಕೆಲಸ ಮಾಡಿ ಎಂದು ವಿನಂತಿಸಿದ್ದೇವೆ. ಮುಂದೆ ಎಲ್ಲವೂ ಸರಿ ಹೋಗುವ ವಿಶ್ವಾಸ ಇದೆ’ ಎಂದು ನಿರಾಣಿ ಅವರು ಸುದ್ದಿಗಾರರಿಗೆ ತಿಳಿಸಿದರು. 

‘ನಿರಾಣಿ ಅವರು ಮನವೊಲಿಕೆಗೆ ಬಂದಿದ್ದರು. ಗಾಯತ್ರಿ ಅವರಿಗೆ ಬೆಂಬಲ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ಅಭ್ಯರ್ಥಿ ಬದಲಿಸುವಂತೆ ಕೋರಿದ್ದೇನೆ’ ಎಂದು ರೇಣುಕಾಚಾರ್ಯ ನಂತರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT