ಭಾನುವಾರ, ಜನವರಿ 19, 2020
22 °C

ಕೆಲಸ ಕೊಡಿಸುವುದಾಗಿ ವಂಚನೆ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ ಆರೋಪಿಗಳ ಮೇಲೆ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತ್‌ ಕಾಲೊನಿ 11ನೇ ಕ್ರಾಸ್‌ ನಿವಾಸಿ ಆರ್‌. ಶಂಕರಪ್ಪ ಹಾಗೂ ಚಿತ್ರದುರ್ಗದ ರವಿಕುಮಾರ ನಾಯ್ಕ್‌ ವಂಚನೆ ಮಾಡಿದ ಆರೋಪಿಗಳು. ನ್ಯಾಯಾಲಯದಲ್ಲಿ ಜವಾನ ಹುದ್ದೆ ಕೊಡಿಸುವುದಾಗಿ ₹ 3 ಲಕ್ಷ ಆರೋಪಿಗಳು ಪಡೆದಿದ್ದಾರೆ. ಈಗ ಉದ್ಯೋಗವನ್ನೂ ಕೊಡಿಸದೇ, ಹಣವನ್ನೂ ವಾಪಸ್‌ ಮಾಡದೇ ತಪ್ಪಿಸಿಕೊಂಡಿದ್ದಾರೆ. ಇದೇ ರೀತಿ ಏಳುಮಲೈ, ಸುಹಾಸಿನಿ, ಭಾರತ್‌ ಕಾಲೊನಿಯ ಇತರರಿಂದಲೂ ಹಣ ಪಡೆದಿದ್ದಾರೆ ಎಂದು ಭಾರತ್‌ ಕಾಲೊನಿಯ ತುಳಸಿಮಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)