ಯುವತಿ ಸಾವು: ಅತ್ಯಾಚಾರ, ಕೊಲೆ ಶಂಕೆ

7

ಯುವತಿ ಸಾವು: ಅತ್ಯಾಚಾರ, ಕೊಲೆ ಶಂಕೆ

Published:
Updated:

ದಾವಣಗೆರೆ: ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುವ ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಹೊಲದಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಆಕೆಯ ತಂದೆ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕಕ್ಕರಗೊಳ್ಳ ಗ್ರಾಮದ ದ್ಯಾಮಪ್ಪ ಅವರ ಎರಡನೇ ಮಗಳು ರಂಜಿತಾ (23) ಮೃತಪಟ್ಟವರು. ಅವರು ಸಂಗಂ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ದಿನ ಬೆಳಿಗ್ಗೆ ಬಂದು ರಾತ್ರಿ 9ಕ್ಕೆ ಹಿಂತಿರುಗುತ್ತಿದ್ದರು. ಮಂಗಳವಾರ ಕೆಲಸಕ್ಕೆ ಹೋದವರು ರಾತ್ರಿ ಬಂದಿರಲಿಲ್ಲ. ಅಂಗಡಿಗೆ ಕರೆ ಮಾಡಿ ವಿಚಾರಿಸಿದಾಗ ರಾತ್ರಿ 8.15ಕ್ಕೆ ಎಂದಿನಂತೆ ಹೊರಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಿಗ್ಗೆ 9.45ರ ಹೊತ್ತಿಗೆ ದ್ಯಾಮಪ್ಪರ ಪರಿಚಯದ ವಿಶ್ವಪಂತ್‌ ಎಂಬವರು ಕರೆ ಮಾಡಿ ಮೃತದೇಹ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೋಗಿ ನೋಡಿದಾಗ ಮೆಕ್ಕೆಜೋಳ ಮತ್ತು ತೊಗರಿ ಇರುವ ಹೊಲದಲ್ಲಿ ಸತ್ತು ಬಿದ್ದಿದ್ದು ಕಂಡು ಬಂದಿದೆ. ಯಾರೋ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಲ್ಲಿ ತಿಳಿಸಿದ್ದಾರೆ. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !