ಹೊನ್ನಾಳಿ: ‘ಬಡ ಕುಟುಂಬದಲ್ಲಿ ಹುಟ್ಟಿ, ಎಷ್ಟೇ ಎತ್ತರಕ್ಕೆ ಬೆಳೆದರೂ ರಾಜಕೀಯವಾಗಿ ಯಾರೂ ಅವಕಾಶ ನೀಡುವುದಿಲ್ಲ. ನಾವೇ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ, ಕಾಂಗ್ರೆಸ್ ಮುಖಂಡ ಜಿ.ಬಿ. ವಿನಯಕುಮಾರ್ ಹೇಳಿದರು.

ಮಂಗಳವಾರ ತಾಲ್ಲೂಕಿನ ಹೊಳೆಹರಳಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ದೇಶದ ಏಳೆಂಟು ಕಡೆಗಳಲ್ಲಿ ಐಎಎಸ್ ತರಬೇತಿ ಕೇಂದ್ರಗಳನ್ನು ತೆರೆದು ಆ ಮೂಲಕ ಬಡವರಿಗೆ, ಅಸಹಾಯಕರಿಗೆ, ಆಸಕ್ತ ಎಲ್ಲ ಜಾತಿ, ಜನಾಂಗದವರಿಗೆ ಸಹಾಯಹಸ್ತ ಚಾಚಿದ್ದೇನೆ. ಉಚಿತ ತರಬೇತಿಗೆ ವ್ಯವಸ್ಥೆ ಮಾಡಿದ್ದೇನೆ. ಪ್ರಾಮಾಣಿಕತೆಯಿಂದ ಬೆಳೆದಿದ್ದೇನೆ. ರಾಜಕೀಯವಾಗಿ ಬೆಳೆದು ಸಮಾಜಸೇವೆ ಮಾಡಬೇಕೆಂದು ವರ್ಷದಿಂದ ಜಿಲ್ಲೆಯ 800ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪಾದಯಾತ್ರೆ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿದ್ದೇನೆ. ನನ್ನ ಪರಿಶ್ರಮದಿಂದಲೇ ನನ್ನ ಹೆಸರು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಸಮಿತಿಗೆ ಹೋಗಿತ್ತು’ ಎಂದರು.

‘ಕೊನೆ ಗಳಿಗೆವರೆಗೂ ನನ್ನ ಹೆಸರು ಇತ್ತು. ಆದರೀಗ ಬೇರೆಯವರ ಹೆಸರು ಘೋಷಣೆಯಾಗಿದೆ. ಇದರಿಂದ ಬೇಸರವಾಗಿದೆ. ಮುಂದೇನು ಮಾಡಬೇಕು ಎನ್ನುವ ಗೊಂದಲವಿದೆ. ಅದಕ್ಕಾಗಿ ನಿಮ್ಮ ಸಲಹೆ, ಸೂಚನೆ ಪಡೆದು ಮುಂದಿನ ಹೆಜ್ಜೆ ಇಡಬೇಕು ಎಂದು ತೀರ್ಮಾನಿಸಿ ತಾಲ್ಲೂಕು ಪ್ರವಾಸ ಕೈಗೊಂಡಿದ್ದೇನೆ’ ಎಂದರು.

‘ಹಿಂದುಳಿದ ವರ್ಗದಿಂದ ಬಂದ ನಾನು ಮೂವತ್ತು ವರ್ಷಗಳ ನಂತರ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ತಪ್ಪೇ’ ಎಂದು ಪ್ರಶ್ನಿಸಿದ ಅವರು, ‘ಈ ಕ್ಷೇತ್ರದಲ್ಲಿ ಕೇವಲ 2 ಕುಟುಂಬಗಳು ಮಾತ್ರ ಚಾಲ್ತಿಯಲ್ಲಿವೆ. ಒಮ್ಮೆ ಒಂದು ಕುಟುಂಬ ಸೋತರೆ, ಮತ್ತೊಮ್ಮೆ ಇನ್ನೊಂದು ಕುಟುಂಬ ಗೆಲ್ಲುವ ತಂತ್ರಗಾರಿಕೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗಾದರೆ, ಈ ಕ್ಷೇತ್ರದ ಅಹಿಂದ ವರ್ಗದವರು ಇಲ್ಲಿ ಬೆಳೆಯಬಾರದೇ?, ನಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ನಾವು ಇಲ್ಲಿ ಮಾಡಬಾರದೇ? ಅದಕ್ಕೆ ಅವಕಾಶ ಕೇಳುವುದು ತಪ್ಪೇ?’ ಎಂದು ಪ್ರಶ್ನಿಸಿದರು.

‘ನಾನು ಪಕ್ಷದ ಯಾರನ್ನೂ ದೂಷಿಸುತ್ತಿಲ್ಲ. ಆದರೆ ನನಗೆ ಅವಕಾಶಗಳನ್ನು ಕೊಡಿ ಎಂದು ಕೇಳುತ್ತಿದ್ದೇನೆ. ಕಾಂಗ್ರೆಸ್ ಎಲ್ಲ ವರ್ಗದ ಹಿತಾಸಕ್ತಿಯನ್ನು ಬಯಸುತ್ತಿರುವುದರಿಂದ ಅದನ್ನು ಒಪ್ಪಿಕೊಂಡು ಬಂದಿದ್ದೇನೆ. ಇನ್ನೂ ಸಮಯವಿದೆ. ಅಲ್ಲಿಯವರೆಗೂ ಜನಾಭಿಪ್ರಾಯ ಕೇಳಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ’ ಎಂದರು.

‘ಹೊಳೆಹರಳಹಳ್ಳಿ ಗ್ರಾಮ ಸೇರಿ ಹತ್ತಾರು ಗ್ರಾಮಗಳಲ್ಲಿ 100ರಿಂದ 150 ಮುಖಂಡರು ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಗ್ರಾಮದ ಮುಖಂಡ ಸಮಿವುಲ್ಲಾ ಅವರು ₹ 10,000 ನನ್ನ ಕೈಗಿತ್ತು ಮತಗಳನ್ನು ಹಾಕಿಸುವ ಭರವಸೆ ನೀಡಿರುವುದು ವಿಶ್ವಾಸವನ್ನು ಹೆಚ್ಚಿಸಿದೆ. ಇನ್ನು ಎಂಟತ್ತು ದಿನಗಳಲ್ಲಿ ಮತದಾರರ ಅಭಿಪ್ರಾಯ ಸಂಗ್ರಹದ ಆಧಾರದ ಮೇಲೆ ನನ್ನ ನಿರ್ಧಾರ ತಿಳಿಸುತ್ತೇನೆ’ ಎಂದು ವಿನಯಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.