ಶನಿವಾರ, ಆಗಸ್ಟ್ 13, 2022
27 °C

ಕಿರುಚಿತ್ರ ನಿರ್ದೇಶಕನಿಂದ ಬಂಗಾರ, ಹಣ ಸುಲಿಗೆ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಿರುಚಿತ್ರ ನಿರ್ದೇಶಕ ಮನೋಜ್ ಅವರನ್ನು ಬೆದರಿಸಿ ಚಿನ್ನದ ಸರ, ಮೊಬೈಲ್ ಹಾಗೂ ಹಣವನ್ನು ಸುಲಿಗೆ ಮಾಡಿದ ಆರೋಪಿಗಳನ್ನು ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಶಿವನಗರದ ಮನ್ಸೂರ್ ಅಲಿ (22) ಸೈಫುಲ್ಲಾ ಅಲಿಯಾಸ್ ರೊಡ್ಡ (21)ಬಂಧಿತರು. ಮತ್ತೊಬ್ಬ ಆರೋಪಿ ಭಾಷಾನಗರದ ಫೈರೂಜ್ ತಲೆ ಮರೆಸಿಕೊಂಡಿದ್ದಾನೆ.

ರಾಣೇಬೆನ್ನೂರು ತಾಲ್ಲೂಕು ಕೋಡಿಯಾಲ್ ಹೊಸಪೇಟೆ ನಿವಾಸಿಯಾದ ಮನೋಜ್ ಅವರು ಕೊಂಡಜ್ಜಿ ಕೆರೆಯ ಬಳಿ ಲೊಕೇಶನ್ ನೋಡಲು ಹೋಗಿದ್ದ ವೇಳೆ ಈ ಮೂವರು ಬೈಕ್‌ನಲ್ಲಿ ಬಂದು ಹೆದರಿಸಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ₹75 ಸಾವಿರ ಬೆಲೆ ಬಾಳುವ ಚಿನ್ನದ ಸರ, ₹20 ಸಾವಿರ ಬೆಲೆಬಾಳುವ ಐಫೋನ್, ₹4 ಸಾವಿರ, ಪ್ಯಾನ್ ಕಾರ್ಡ್, ಎರಡು ಎಟಿಎಂ ಕಾರ್ಡ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಸೋಮವಾರ ವಾಹನ ತಪಾಸಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದು, ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಎಸ್‌ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಎಎಸ್ಪಿ ರಾಜೀವ್, ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ರವಿಕುಮಾರ್, ಎಂ.ಶಿವಪ್ರಸಾದ್ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಮತ್ತು ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.