ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ | ಸೋರುತಿದೆ ಸರ್ಕಾರಿ ಶಾಲೆ; ದುರಸ್ತಿಗೆ ಮನವಿ

Published 24 ಜುಲೈ 2023, 15:40 IST
Last Updated 24 ಜುಲೈ 2023, 15:40 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಹೊಬಳಿಯ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸೋರುತ್ತಿದ್ದು, ಚಾವಣಿ ಬೀಳುವ ಸ್ಥಿತಿಯಲ್ಲಿದೆ. ಶಾಲೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ವಿದ್ಯರ್ಥಿಗಳು ಆಗ್ರಹಿಸಿದ್ದಾರೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 40 ವಿದ್ಯಾರ್ಥಿಗಳಿದ್ದಾರೆ. 3 ಕೊಠಡಿಗಳು, ಮೂವರು ಶಿಕ್ಷಕರು ಇದ್ದಾರೆ. ಒಂದು ಕೊಠಡಿ ನಲಿ -ಕಲಿಗೆ ಬಳಕೆಯಾದರೆ, ಉಳಿದ 2ರಲ್ಲಿ 4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. 3 ಕೊಠಡಿಗಳು ಹಾಳಾಗಿವೆ ಎಂದು ಮುಖ್ಯಶಿಕ್ಷಕ ಪರಮೇಶ್ವರಪ್ಪ ತಿಳಿಸಿದ್ದಾರೆ. 

ಈ ಸಂಬಂಧ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಮನವಿ ನೀಡಲಾಗಿದೆ. ಹೊಸ ಕೊಠಡಿಗಳು ಆಗುವವರಗೆ ಶಿಥಿಲಗೊಂಡಿರುವ ಕೊಠಡಿಗಳ ಚಾವಣಿ ರಿಪೇರಿ ಮಾಡಿಸಿದರೆ ತರಗತಿಗಳನ್ನು ನಡೆಸಲು ನುಕೂಲವಾಗುತ್ತದೆ. ಒಬ್ಬ ಅಥಿತಿ ಶಿಕ್ಷಕರು ಬೇಕಾಗಿದ್ದಾರೆ. ಬಿಇಒ ಅವರು 2 ಕೊಠಡಿಗಳು ಮುಂಜೂರಾಗಿವೆ ಎಂದು ತಿಳಿಸಿದ್ದಾರೆ. ಆದರೆ, ಯಾವುದೇ ಆದೇಶ ಬಂದಿಲ್ಲ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT