ದಾವಣಗೆರೆ: ರಾಜ್ಯದ ಹಕ್ಕಿಪಿಕ್ಕಿ ಸಮುದಾಯದ 8 ಜನರು ವೀಸಾ ಅವಧಿ ಮುಗಿದ ಕಾರಣ ಮಧ್ಯ ಆಫ್ರಿಕಾದ ರಾಷ್ಟ್ರ ಚಾಡ್ನಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮೂಲದ ಎಂಟು ಜನರಲ್ಲಿ ಮೂವರು ಮಹಿಳೆಯರಿದ್ದಾರೆ. ಇವರ ವೀಸಾ ಅವಧಿ 2025ರ ಡಿಸೆಂಬರ್ 22 ರಂದು ಮುಕ್ತಾಯವಾಗಿದೆ.

‘ಗಿಡಮೂಲಿಕೆಗಳ ಔಷಧ ಮಾರಾಟಕ್ಕಾಗಿ ಸೆಪ್ಟೆಂಬರ್ನಲ್ಲಿ ಚಾಡ್ನ ರಾಜಧಾನಿ ಎನ್ಜಮೇನಾಗೆ ಬಂದಿದ್ದೆವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ವೀಸಾ ನವೀಕರಣಗೊಂಡಿಲ್ಲ. ತಲಾ ₹ 1.5 ಲಕ್ಷ ದಂಡ ಪಾವತಿಸದಿದ್ದರೆ, ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಭಾರತ ಸರ್ಕಾರ ನಮಗೆ ನೆರವು ನೀಡಬೇಕು’ ಎಂದು ಬಂಧನದ ಭೀತಿಯಲ್ಲಿರುವವರು ವಿಡಿಯೊ ಮೂಲಕ ಒತ್ತಾಯಿಸಿದ್ದಾರೆ.

‘ವೀಸಾ ನವೀಕರಣಕ್ಕೆ ಮೊದಲೇ ಅರ್ಜಿ ಸಲ್ಲಿಸಿದ್ದರೂ, ಅಲ್ಲಿನ ಅಧಿಕಾರಿಗಳು ಸಮಸ್ಯೆ ಸೃಷ್ಟಿಸಿದ್ದಾರೆ. ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮವಹಿಸಬೇಕು’ ಎಂದು ಕರ್ನಾಟಕ ಹಕ್ಕಿ-ಪಿಕ್ಕಿ ಬುಡಕಟ್ಟು ಸಂಘಟನೆ ಅಧ್ಯಕ್ಷ ಪುನೀತ್ ಕುಮಾರ್ ಆಗ್ರಹಿಸಿದ್ದಾರೆ.

‘ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಒದಗಿಸಬೇಕು’ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡಿದ್ದೇವೆ’ ಎಂದೂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.