ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಮಾ.13ರಂದು ಸಾಮೂಹಿಕ ವಿವಾಹ, ಮಾದಿಗರ ಜನಜಾಗೃತಿ ಸಮಾವೇಶ

ಹರಿಹರ: ಮಾದಾರ ಚೆನ್ನಯ್ಯ ಜಯಂತಿ ನಿಮಿತ್ತ ಕಾರ್ಯಕ್ರಮ
Published 24 ಫೆಬ್ರುವರಿ 2024, 13:06 IST
Last Updated 24 ಫೆಬ್ರುವರಿ 2024, 13:06 IST
ಅಕ್ಷರ ಗಾತ್ರ

ಹರಿಹರ: ಶಿವಶರಣ ಮಾದಾರ ಚೆನ್ನಯ್ಯ ಜಯಂತಿ ಅಂಗವಾಗಿ ಮಾ. 13ರಂದು ಹರಿಹರದ ಸಿದ್ದೇಶ್ವರ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ಸರ್ವಧರ್ಮ ಸರಳ ಸಾಮೂಹಿಕ ವಿವಾಹ ಹಾಗೂ ಮಾದಿಗರ ಜನ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಹರಿಹರ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ ಎಂ.ಎಸ್.ಆನಂದ್ ಕುಮಾರ್ ತಿಳಿಸಿದರು.

ಮಠಾಧೀಶರು, ಧರ್ಮಗುರುಗಳು, ಹಾಲಿ, ಮಾಜಿ ಸಚಿವರು, ಶಾಸಕರು ಭಾಗವಹಿಸುವರು. ವಿವಾಹವಾಗಲು ಇಚ್ಚಿಸುವವರು, ವಯಸ್ಸು, ವಾಸಸ್ಥಳ, ಜಾತಿ, ಮೊದಲ ವಿವಾಹದ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. 

ವಿವಾಹವಾದ ದಂಪತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಸೌಲಭ್ಯ ದೊರಕಿಸಲಾಗುವುದು. ಆಸಕ್ತರು ಮಾ.1ರೊಳಗೆ ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ. 7483386695, 7406609623, 7349487591, 9342696588 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT