ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ, ಮಳೆ: ನೆಲಕಚ್ಚಿದ ಭತ್ತ, ಉರುಳಿದ ಮರಗಳು

ಮಳೆಹಾನಿ ಪ್ರದೇಶಕ್ಕೆ ಹಾಲಿ, ಮಾಜಿ ಶಾಸಕರ ಭೇಟಿ
Last Updated 18 ಮೇ 2022, 3:56 IST
ಅಕ್ಷರ ಗಾತ್ರ

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಸುರಿದ ಮಳೆಯಿಂದಾಗಿ 1040 ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಹಲವು ತೆಂಗು ಅಡಿಕೆ ಮರಗಳು ಬಿದ್ದಿವೆ. 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿವೆ. ವಿವಿಧ ಗ್ರಾಮಗಳ 23 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬೆಳೆಹಾನಿಗೊಳಗಾದ ಪ್ರದೇಶಕ್ಕೆ ಮಂಗಳವಾರ ಶಾಸಕ ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್ , ತಹಶೀಲ್ದಾರ್ ಡಾ. ಅಶ್ವತ್ಥ ಎಂ.ಬಿ., ಉಪತಹಶೀಲ್ದಾರ್ ಆರ್. ರವಿ ಭೇಟಿ ನೀಡಿ ಪರಿಶೀಲಿಸಿದರು. ನಷ್ಟವಾದ ಬೆಳೆಗೆ ಸೂಕ್ತ ರೀತಿ ಪರಿಹಾರ ಕೊಡಿಸುವಂತೆ ರೈತರು ಆಗ್ರಹಿಸಿದರು.

ಬಹುತೇಕ ಪ್ರದೇಶದಲ್ಲಿ ಕಟಾವಿಗೆ ಸಿದ್ಧವಾಗಿದ್ದ ಭತ್ತ ನೆಲಕಚ್ಚಿದೆ. ನಷ್ಟ ಹೊಂದಿದ ರೈತರಿಗೆ 2-3 ದಿನಗಳಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡುವಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಬೆಳೆಹಾನಿಗೊಳಗಾದ ರೈತರು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಮಾಜಿ ಶಾಸಕರು ಸೂಚಿಸಿದರು.

ಕೃಷಿ ಅಧಿಕಾರಿ ಇನಾಯತ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ, ಎಎಚ್ಒ ಸಂತೋಷ್‌, ಆರ್‌ಐ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಸುಭಾನಿ, ಶ್ರೀಧರ ಮೂರ್ತಿ, ಶಿವಕುಮಾರ್, ದೇವರಾಜ್, ರೈತರು ಇದ್ದರು.

ಬೆಳೆಹಾನಿ ವಿವರ: ಮಲೇಬೆನ್ನೂರು 90 ಎಕರೆ ಭತ್ತ, ಕುಂಬಳೂರು, ಕೊಕ್ಕನೂರು, ಕಂಬತ್ತನಹಳ್ಳಿ ತಲಾ 45 ಎಕರೆ ಭತ್ತ, 250 ಅಡಿಕೆ, 500 ಬಾಳೆ, 120 ತೆಂಗಿನಮರಗಳು, ಸಿರಿಗೆರೆ 100 ಎಕರೆ ಭತ್ತ, 19 ಮನೆಗೆ ಹಾನಿ, ಕಾಮಲಾಪುರ 25 ಎಕರೆ ಭತ್ತ, ಕುಣಿಬೆಳೆಕೆರೆ 160 ಎಕರೆ ಭತ್ತ, 10 ಅಡಿಕೆ ಮರ, ನಂದಿತಾವರೆ 80 ಎಕರೆ ಭತ್ತ, ಬೂದಿಹಾಳು 25 ಎಕರೆ ಭತ್ತ, ಜಿಗಳಿ 10 ಎಕರೆ ಭತ್ತ, ಯಲವಟ್ಟಿ 30 ಎಕರೆ ಭತ್ತ, ಹಳ್ಳಿಹಾಳು 10 ಎಕರೆ ಭತ್ತ, ಧೂಳೆಹೊಳೆ 80 ಎಕರೆ ಭತ್ತ, ವಾಸನ 30 ಎಕರೆ ಭತ್ತ, ಉಕ್ಕಡಗಾತ್ರಿ 15 ಎಕರೆ ಭತ್ತ, ಹಾಲಿವಾಣ 20 ಎಕರೆ ಭತ್ತ, ಕೊಪ್ಪ 10 ಎಕರೆ ಭತ್ತ, ಕೊಕ್ಕನೂರು 70 ಎಕರೆ ಭತ್ತ, ಹಿಂಡಸಗಟ್ಟ 60 ಎಕರೆ ಭತ್ತ, ಗೋವಿನಹಾಳ್ 40 ಎಕರೆ ಭತ್ತ, ಮೂಗಿನಗೊಂದಿ 25 ಎಕರೆ ಭತ್ತ, ಬಗ್ಗಡನಹಾಳ್ ಸೇರಿ ಒತ್ತು 25 ಗ್ರಾಮಗಳ 1,040 ಎಕರೆ ಭತ್ತದ ಬೆಳೆ ಹಾನಿಗೊಳಗಾಗಿದೆ.

40 ವಿದ್ಯುತ್ ಕಂಬಗಳು ತುಂಡಾಗಿವೆ. 20 ವಾಲಿವೆ. ನಷ್ಟದ ಮೌಲ್ಯ ₹ 5.6 ಲಕ್ಷ ಎಂದು ಶಾಖಾಧಿಕಾರಿ ಕೊಟ್ರೇಶ್ ಮಾಹಿತಿ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT