ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು | ವ್ಯಾಪಕ ಮಳೆ: ತುಂಬಿದ ಕೆರೆಕಟ್ಟೆಗಳು

Published 21 ಮೇ 2024, 6:13 IST
Last Updated 21 ಮೇ 2024, 6:13 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ವ್ಯಾಪಕವಾಗಿ ಮಳೆ ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಸಮೃದ್ಧ ಮಳೆ‌ಯಾಗಿದ್ದು, ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆರೆಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ.

ಗಡಿಮಾಕುಂಟರ ಕೆರೆಗೆ ನಾಲ್ಕು‌ ಅಡಿಗೂ ಹೆಚ್ಚು ನೀರು ಬಂದಿದ್ದು, ಹಲವು ಹಳ್ಳಗಳು ತುಂಬಿ ಹರಿದು ಬರುತ್ತಿವೆ. ಕೆರೆಗೆ ಎರಡು ವರ್ಷದಲ್ಲಿ ಮೊದಲ‌ ಬಾರಿಗೆ ನೀರು ಹರಿದು ಬಂದಿದ್ದು ಕೆರೆ ಏರಿಯಲ್ಲಿ‌ ಬಿರುಕು ಕಾಣಿಸಿಕೊಂಡು ಆತಂಕ‌ ಮೂಡಿಸಿದೆ.

2004ರಲ್ಲಿ ಈ ಕೆರೆ ಏರಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿತ್ತು.

ಭರಮಸಮುದ್ರ ಕೆರೆಗೆ ನೀರು ಹರಿದು ಬರುತ್ತಿದೆ. ಉಳಿದಂತೆ ಗೋಕಟ್ಟೆಗಳು, ಚೆಕ್ ಡ್ಯಾಂ ಗಳು ಭರ್ತಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT