ಬುಧವಾರ, ಸೆಪ್ಟೆಂಬರ್ 29, 2021
20 °C

ಹಿರೇಕಲ್ಮಠ: ಸರಳ ಚನ್ನಪ್ಪಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ನಗರದಲ್ಲಿರುವ ಹಿರೇಕಲ್ಮಠದ ಚನ್ನಪ್ಪಸ್ವಾಮಿ ಮಹಾರಥೋತ್ಸವ ಕೋವಿಡ್ ನಿಯಮಾನುಸಾರ ಶುಕ್ರವಾರ ಸರಳವಾಗಿ ನೆರವೇರಿತು.

ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾದ ಹಿರೇಕಲ್ಮಠದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದ ಅಂಗವಾಗಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದ ಬಳಿಕ ಆಲಂಕೃತಗೊಂಡ ಮಹಾರಥೋತ್ಸವವು ಈ ಬಾರಿ ಮಠದ ಅವರಣದೊಳಗೆ ನಡೆಯಿತು.

ಹಿರೇಕಲ್ಮಠದ ಪೀಠಾಧ್ಯಾಕ್ಷ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಸಮ್ಮುಖದಲ್ಲಿ ಕರ್ತೃಗದ್ದುಗೆ ಹಾಗೂ ವೀರಭದ್ರೇಶ್ವರ ಮೂರ್ತಿ ಮತ್ತು ಮಾರಿಕೊಪ್ಪದ ಹಳದಮ್ಮ ದೇವಿಗೆ ಮಹಾ ರುದ್ರಾಭಿಷೇಕ, ಬಿಲ್ವಾರ್ಚನೆ ದೀಪೋತ್ಸವ ಮಹಾಮಂಗಳಾರತಿಯ ವಿಶೇಷ ಪೂಜೆ ನಡೆಯಿತು.

ಸೂರ್ಯೋದಯಕ್ಕೆ ಸರಿಯಾಗಿ ಸ್ವಾಮೀಜಿ ಅವರನ್ನು ಹೊತ್ತ ಪಲ್ಲಕ್ಕಿ ಮಹೋತ್ಸವವು ಮಂಗಳ
ವಾದ್ಯದೊಂದಿಗೆ ಮಠದ ಸಾಕ್ಷಿ ಗಣಪತಿ ಅವರಣಕ್ಕೆ ಆಗಮಿಸಿತು. ಬಳಿಕ ಸ್ವಾಮೀಜಿ ಅವರು ರಥಾರೋಹಣಗೈಯುತ್ತಿದ್ದಂತೆ ನೆರೆದಿದ್ದ ನೂರಾರು ಭಕ್ತರು ‘ಚನ್ನಪ್ಪ ಸ್ವಾಮೀಜಿ ಮಹಾರಾಜ್ ಕೀ ಜೈ, ಒಡೆಯರ್ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಗೆ ಜೈ, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಜಯಘೋಷಗಳೊಂದಿಗೆ ರಥವನ್ನು ಎಳೆದರು. ರಥವು ಮಠದ ಅವರಣದಲ್ಲಿ ಮುಂದೆ ಸಾಗುತ್ತಿದ್ದಂತೆ ಭಕ್ತರು ಸ್ವಾಮೀಜಿ ಅವರಿಗೆ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಪ್ರಸಾದ ಸೇವೆ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.