ಹೊನ್ನಾಳಿ: ತಾಯಿಯ ಹೆಸರಿನಲ್ಲಿ ಸಸಿ ನೆಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ದಿನಾಚರಣೆಯಂದು ಕರೆ ನೀಡಿದ ಬಳಿಕ ಈವರೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಶಾಲಾ, ಕಾಲೇಜುಗಳಲ್ಲಿ 1,250 ಸಸಿಗಳನ್ನು ನೆಡಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಚನ್ನಪ್ಪಸ್ವಾಮಿ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಗುರುವಾರ ಸಸಿನೆಡುವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಮೋದಿಯವರು ಯಾವುದೇ ಹೇಳಿಕೆ ಕೊಟ್ಟು ಕೆಲಸ ಆರಂಭಿಸಿದರೆ, ಅದಕ್ಕೊಂದು ಅರ್ಥ ಮತ್ತು ವೈಜ್ಞಾನಿಕ ಕಾರಣ ಇರುತ್ತದೆ. ಇದನ್ನು ಸಮರ್ಪಣಾ ಮನೋಭಾವದಿಂದ ಸ್ವೀಕರಿಸಿ, ಅನೇಕ ಕೆಲಸಗಳ ಮಧ್ಯೆಯೂ ಸಸಿ ನೆಡುವ ಕಾರ್ಯಕ್ರಮ ಮಾಡಿದ್ದೇನೆ’ ಎಂದರು.

ಎಸ್ಜೆವಿಪಿ ಬಿಇಡಿ ಕಾಲೇಜು, ಎಸ್ಎಂಎಸ್ ಪ್ರಥಮ ದರ್ಜೆ ಕಾಲೇಜು, ಎಸ್ಜೆಜೆ ಪ್ರೌಢಶಾಲೆ ಮತ್ತು ಐಟಿಐ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.