ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ವಿಜ್ಞಾನಕ್ಕಾಗಿ ಭಾರತದ ನಡಿಗೆ

Last Updated 9 ಆಗಸ್ಟ್ 2019, 19:43 IST
ಅಕ್ಷರ ಗಾತ್ರ

ದಾವಣಗೆರೆ: ‘ವಿಜ್ಞಾನಕ್ಕಾಗಿ ಭಾರತದ ನಡಿಗೆ’ಯ ಮೂರನೇ ಆವೃತ್ತಿ ನಗರದಲ್ಲಿ ಶುಕ್ರವಾರ ಯಶಸ್ವಿಯಾಗಿ ಜರುಗಿತು.

ವಿದ್ಯಾನಗರದಿಂದ ಆರಂಭವಾಗಿ ಗುಂಡಿ ಮಹದೇವಪ್ಪ ವೃತ್ತದವರೆಗೆ ಸಾಗಿತು. ಈ ನಡಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಬಿಐಇಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಿ.ಇ. ರಂಗಸ್ವಾಮಿ, ‘ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ 3ರಷ್ಟು ಹಣವನ್ನು ವೈಜ್ಞಾನಿಕ ಸಂಶೋಧನೆಗಳಿಗೆ ವಿನಿಯೋಗಿಸಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಲು ಪ್ರಾಯೋಗಿಕ, ಗುಣಾತ್ಮಕ ಶಿಕ್ಷಣ ಸಹಕಾರಿ. ಅವೈಜ್ಞಾನಿಕ, ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಜನರು ಹೊರಬರಬೇಕು’ ಎಂದು ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ, ‘ವಿಜ್ಞಾನ ಕೇವಲ ಕಲಿಕೆಗಲ್ಲ. ಇದು ಜೀವನದ ಭಾಗವಾಗಬೇಕು. ವಿಜ್ಞಾನದ ದಂತ ಕಥೆಗಳಾದ ಚಾರ್ಲ್ಸ್‌ ಡಾರ್ವಿನ್‍ ಅವರು ಸುತ್ತಲಿನ ಪರಿಸರವನ್ನೇ ಪ್ರಯೋಗಶಾಲೆಯಾಗಿ ಬಳಸಿ, ಸೂಕ್ಷ್ಮವಾಗಿ ಗಮನಿಸಿ ಅದರಿಂದ ವಿಕಾಸವಾದ ಸಿದ್ಧಾಂತವನ್ನೇ ಪ್ರತಿಪಾದಿಸಿದರು. ಅದರಂತೆಯೇ, ಮೆಂಡೆಲ್‍ರವರು ತಳಿಶಾಸ್ತ್ರವನ್ನು ಅಭಿವೃದ್ಧಿಪಡಿಸಿದರು. ಹಾಗಾಗಿ ವಿಜ್ಞಾನದ ಪ್ರತಿ ವಿದ್ಯಾರ್ಥಿಗೂ ಗಮನಿಸುವ ಕುತೂಹಲ ಅವಶ್ಯ’ ಎಂದರು.

ವಿಜ್ಞಾನಕ್ಕಾಗಿ ಭಾರತದ ನಡಿಗೆಯ ದಾವಣಗೆರೆ ಸಂಚಾಲಕ ಸಂತೋಷ್‍, ‘ಸಂಶೋಧನಾ ಕಾರ್ಯಗಳಲ್ಲಿ ಅಮೋಘ ಸಾಧನೆ ಮಾಡಿರುವ ದೇಶಗಳಲ್ಲಿ ಶಿಕ್ಷಣಕ್ಕೆ ಜಿಡಿಪಿಯ ಶೇ 6 ಮತ್ತು ವಿಜ್ಞಾನಕ್ಕೆ ಶೇ 3ವರೆಗೆ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಇದು ಕ್ರಮವಾಗಿ ಶೇ 3 ಮತ್ತು ಶೇ 1ಕ್ಕಿಂತ ಕಡಿಮೆ ಇದೆ. ಹಲವು ದಶಕಗಳಿಂದ ಈ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮೆಡಿಕಲ್ ಸರ್ವಿಸ್ ಸೆಂಟರ್‍ನ ರಾಜ್ಯ ಕಾರ್ಯದರ್ಶಿ ಡಾ. ವಸುಧೇಂದ್ರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT