ದಾವಣಗೆರೆಯ ಲೋಕಿಕೆರೆ ಕೈಗಾರಿಕಾ ಪ್ರದೇಶದಲ್ಲಿ ಹಾಳಾಗಿರುವ ರಸ್ತೆ -ಪ್ರಜಾವಾಣಿ ಚಿತ್ರ
ದಾವಣಗೆರೆಯ ಲೋಕಿಕೆರೆ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬದಿ ಸುರಿದಿರುವ ಕಟ್ಟಡ ತ್ಯಾಜ್ಯ -ಪ್ರಜಾವಾಣಿ ಚಿತ್ರ
ದಾವಣಗೆರೆಯ ಲೋಕಿಕೆರೆ ಕೈಗಾರಿಕಾ ಪ್ರದೇಶದಲ್ಲಿ ಮುಚ್ಚಿಹೋಗಿರುವ ಚರಂಡಿ -ಪ್ರಜಾವಾಣಿ ಚಿತ್ರ

ದೇಶಕ್ಕೆ ರೈತರು ಬೆನ್ನೆಲುಬಾದರೆ ಸಣ್ಣ ಕೈಗಾರಿಕೋದ್ಯಮಿಗಳು ಪಕ್ಕೆಲುಬು. ಕೃಷಿ ಹೊರತುಪಡಿಸಿದರೆ ಅತಿ ಹೆಚ್ಚು ಉದ್ಯೋಗ ನೀಡಿದ್ದು ಕೈಗಾರಿಕೆ. ಕೃಷಿಯಷ್ಟೇ ಮಹತ್ವ ಇದಕ್ಕೂ ಸಿಗಬೇಕು
ಬಿ. ಶಂಭುಲಿಂಗಪ್ಪ ಅಧ್ಯಕ್ಷರು ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘಆಸ್ತಿ ತೆರಿಗೆಯ ಸಂಕಷ್ಟ
‘ಕೆಐಎಡಿಬಿ’ ಸ್ವಾಧೀನದಲ್ಲಿದ್ದ ಕರೂರು ಕೈಗಾರಿಕಾ ಪ್ರದೇಶ 2024ರ ನವೆಂಬರ್‌ನಲ್ಲಿ ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಈ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಆಸ್ತಿ ತೆರಿಗೆ ಹಲವು ಪಟ್ಟು ಹೆಚ್ಚಾಗಿದ್ದು ಉದ್ಯಮಿಗಳಲ್ಲಿ ದಿಗಿಲು ಮೂಡಿಸಿದೆ. 1 ಎಕರೆ ಪ್ರದೇಶ ಹೊಂದಿದ ಕೈಗಾರಿಕೆ ಪ್ರತಿ ವರ್ಷ ‘ಕೆಐಎಡಿಬಿ’ಗೆ ₹ 10 ಸಾವಿರ ತೆರಿಗೆ ಪಾವತಿಸುತ್ತಿತ್ತು. ಮಹಾನಗರ ಪಾಲಿಕೆಗೆ ಈಗ ಇದೇ ಕೈಗಾರಿಕೆ ಆಸ್ತಿ ತೆರಿಗೆಯಾಗಿ ಅಂದಾಜು ₹ 1 ಲಕ್ಷ ಪಾವತಿಸಬೇಕಿದೆ. 2024ರ ಏಪ್ರಿಲ್‌ನಿಂದ ತೆರಿಗೆ ಪಾವತಿಸಬೇಕು ಎಂಬ ಪಾಲಿಕೆಯ ಸೂಚನೆ ಉದ್ಯಮಿಗಳನ್ನು ಕೆರಳಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಮಧ್ಯಪ್ರವೇಶದಿಂದ 2025ನೇ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ಜಾರಿಗೆ ಬಂದಿದೆ.