ಗುರುವಾರ , ಅಕ್ಟೋಬರ್ 29, 2020
21 °C
ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಇಂದು ಪ್ರತಿಭಟನೆ

ದಾವಣಗೆರೆ: ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ:  ಸೆ. 30 ರೊಳಗೆ ಜಿಲ್ಲೆಯಲ್ಲಿ ಮೆಕ್ಕೆಜೋಳ, ಭತ್ತ ಮತ್ತು ಅಡಿಕೆ ಖರೀದಿ ಕೇಂದ್ರ ತೆರೆಯುವಂತೆ ಮನವಿ ಮಾಡಿದ್ದರೂ ಸರ್ಕಾರ ಪರಿಗಣಿಸಿಲ್ಲ. ಸರ್ಕಾರದ ವಿರುದ್ಧ ಅಕ್ಟೋಬರ್ 2ರಂದು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಹೇಳಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುರುವಾರ ನಡೆದ ಸಭೆಯ ಬಳಿಕ ಮಾತನಾಡಿದರು.

ಖರೀದಿ ಕೇಂದ್ರ ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನೀತಿ ಖಂಡಿಸಿ ಅ.2ರಂದು ಬೆಳಿಗ್ಗೆ 8 ಕ್ಕೆ ತಾಲ್ಲೂಕು ಕಚೇರಿ ಎದುರು ಕಪ್ಪು ಬಟ್ಟೆ ಧರಿಸಿ ಮೌನ ಪ್ರತಿಭಟನೆ ನಡೆಸುವುದು. ಮಾಯಕೊಂಡ ಹೋಬಳಿ ಮತ್ತು ಪ್ರತಿ ಗ್ರಾಮ ಪಂಚಾಯಿತಿ ಎದುರು ಅನಿರ್ದಿಷ್ಟ ಚಳವಳಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ 1.25 ಲಕ್ಷದಿಂದ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಸರಾಸರಿ ಇಳುವರಿ ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಲ್ ಬರುತ್ತದೆ. ಒಟ್ಟು ಜಿಲ್ಲೆಯಲ್ಲಿ ಸರಾಸರಿ 6.50 ಲಕ್ಷ ಮೆಟ್ರಿಕ್‍ನಿಂದ 7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳು ₹ 1740 ರಿಂದ ₹ 1780ಕ್ಕೆ ಖರೀದಿ ಮಾಡಬಾರದು ಎಂದು ಹೇಳುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ₹ 840 ರಿಂದ ₹ 900ಕ್ಕೆ ಖರೀದಿಯಾದರೆ ರೈತರಿಗೆ ಪ್ರತಿ ಕ್ವಿಂಟಲ್‍ಗೆ ₹ 880 ನಷ್ಟವಾಗುತ್ತಿದೆ ಎಂದು ರವಿಕುಮಾರ‌ ಹೇಳಿದರು.

ಸಭೆಯಲ್ಲಿ ಸಂಘದ ಮುಖಂಡರಾದ ಕಬ್ಬಳ ಪ್ರಸಾದ್, ಬಲ್ಲೂರು ಪರಶುರಾಮರೆಡ್ಡಿ, ಆವರಗೆರೆ ಇಟಗಿ ಬಸವರಾಜಪ್ಪ, ಲಿಂಗರಾಜ ಪಾಮೇನಹಳ್ಳಿ, ಆರ್.ಜಿ. ಬಸವರಾಜ ರಾಂಪುರ, ಮಾಯಕೊಂಡದ ಸಿ.ಟಿ. ನಿಂಗಪ್ಪ, ಮಾಯಕೊಂಡದ ಗೌಡ್ರ ಅಶೋಕ, ಆಲೂರು ಪರಮೇಶ್ವರಪ್ಪ, ಎನ್.ಟಿ. ಜಯನಾಯ್ಕ ನಾಗರಕಟ್ಟೆ, ಅಲೂರು ಮಂಜಪ್ಪ, ಬಲ್ಲೂರು ಅಣ್ಣಪ್ಪ, ಅಣಬೇರು ಕುಮಾರಸ್ವಾಮಿ, ಆವರಗೆರೆ ಕಲ್ಲಪ್ಪ, ಬೂದಾಳ್ ಮಹೇಶ್, ಐ.ಆರ್. ಕರುಣಾ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.