ದಾವಣಗೆರೆ: ಜೈನ ಸಮುದಾಯದ ಪುರೋಹಿತರಿಗೆ ಮಾಸಿಕ ಗೌರವಧನ ನೀಡಲು ಸರ್ಕಾರದಿಂದ ಬಿಡುಗಡೆಯಾಗಿದ್ದ ₹ 10 ಕೋಟಿ ಅನುದಾನದ ಪೈಕಿ ₹ 6.5 ಕೋಟಿ ಮಾತ್ರ ಬಳಕೆಯಾಗಿದ್ದು, ₹ 3.50 ಕೋಟಿ ಉಳಿದಿದೆ’ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಶನಿವಾರ ತಿಳಿಸಿದರು.

ನಗರದಲ್ಲಿ ಸಕಲ ದಿಗಂಬರ ಜೈನ ಸಮಾಜ ಹಾಗೂ ಶ್ರೀ ಮಹಾವೀರ ಸಂಘದಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು, ‘ಜೈನ ಸಮುದಾಯದ ಪುರೋಹಿತರಿಗೆ ಮಾಸಿಕ ₹ 6 ಸಾವಿರ ಗೌರವಧನ ನೀಡಲಾಗುತ್ತಿದೆ. ಇದುವರೆಗೂ ನೋಂದಣಿ ಮಾಡಿಕೊಳ್ಳದವರು, ಕೂಡಲೇ ಹೆಸರು ನೋಂದಾಯಿಸುವ ಮೂಲಕ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

‘ಜೈನ ಸಮುದಾಯದ ಅಭಿವೃದ್ಧಿಗೆ 2023ರಲ್ಲಿ ₹ 25 ಕೋಟಿ ಬಿಡುಗಡೆಯಾಗಿತ್ತು. 2024ರಲ್ಲಿ ₹ 50 ಕೋಟಿ, ಈ ವರ್ಷ 100 ಕೋಟಿ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿ ಮುಂಬರುವ ಬಜೆಟ್ನಲ್ಲಿ ₹ 200 ಕೋಟಿ ನಿಗದಿಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.