ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ತಾಂತ್ರಿಕ ವಿದ್ಯಾಲಯದ ಆವಿಷ್ಕಾರ ರಾಜ್ಯ ಮಟ್ಟಕ್ಕೆ ಆಯ್ಕೆ

Last Updated 23 ಜೂನ್ 2018, 13:28 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಜೈನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಆವಿಷ್ಕಾರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.

ಪ್ರದೀಪಕುಮಾರ ಇಳಯ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಸಿ. ಸಂತೋಷ, ರಘುಪತಿ, ಟಿ. ಸಂತೋಷ, ಎಂ.ಸಿ. ಪ್ರವೀಣ ಕ್ಯಾರಬ್ ಬೀಜ ಮತ್ತು ತಿರಳನ್ನು ಬೇರ್ಪಡಿಸುವ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ.

ಬಿ.ಟಿ. ರಮೇಶ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಶ್ರೀಕಾಂತ ಅಂಬಲಿ, ಎಂ. ಸೌಜನ್ಯಾ, ವಿ.ಎಸ್‌. ಸ್ವಾತಿ, ಸಿರಾಜ್‌ ಮೋಟರ್ ಸೈಕಲ್ ಗೇರ್‌ಗಳನ್ನು ಆಟೋಮ್ಯಾಟಿಕ್ ಬಟನ್ ಮೂಲಕ ನಿಯಂತ್ರಿಸುವ ಯಂತ್ರವನ್ನು ಆವಿಷ್ಕಾರ ಮಾಡಿದ್ದಾರೆ.

ಬಿ.ಆರ್‌. ಶ್ರೀನಿವಾಸ್‌ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್‌ ವಿಭಾಗದ ವಿದ್ಯಾರ್ಥಿಗಳಾದ ಶ್ರೀನಿವಾಸ ಪ್ರಸಾದ, ಐಶ್ವರ್ಯಾ, ಚಿನ್ಮಯಾ, ಹರ್ಷಿತಾ ಇನ್‌ಸ್ಟಾಕೇರ್-ರಕ್ತದ ಲಭ್ಯತೆ, ಡಾಕ್ಟರ್‌ರ ಬಗ್ಗೆ ಮಾಹಿತಿ, ಮೆಡಿಸಿನ್‌ ಮಾಹಿತಿ ಕೊಡುವ ಮೋಬೈಲ್ ಆಂಡ್ರಾಯ್ಡ್‌ ಆಪ್ ಕಂಡು ಹಿಡಿದಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ 2018ರ ರಾಜ್ಯ ಮಟ್ಟದ ಪ್ರಾಜೆಕ್ಟ್ ಪ್ರದರ್ಶನಕ್ಕೆ ಈ ಆವಿಷ್ಕಾರಗಳು ಆಯ್ಕೆಯಾಗಿವೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎಸ್‌. ಮಂಜುನಾಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT