ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಮ್ಮ ಗೋಪಿನಾಯ್ಕ ದಾವಣಗೆರೆ ಮೇಯರ್

Last Updated 25 ಫೆಬ್ರುವರಿ 2022, 9:19 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರಪಾಲಿಕೆ ಮೇಯರ್ ಆಗಿ 30ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರ್. ಜಯಮ್ಮ ಗೋಪಿನಾಯ್ಕ ಹಾಗೂ ಉಪಮೇಯರ್ ಆಗಿ 8ನೇ ವಾರ್ಡ್‌ನ ಬಿಜೆಪಿಯ ಗಾಯಿತ್ರಮ್ಮ ಖಂಡೋಜಿರಾವ್ 3ನೇ ಅವಧಿಗೆ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯಾಗಬೇಕಿದೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಜಯಮ್ಮ ಕಾಂಗ್ರೆಸ್ ಅಭ್ಯರ್ಥಿ ನಾಗರತ್ನಮ್ಮ ಅವರ ವಿರುದ್ದ ಜಯಗಳಿಸಿದರು.

ಜಯಮ್ಮ ಗೋಪಿನಾಯ್ಕ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಮೂಲಕ ಬಿಜೆಪಿ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 3ನೇ ಅವಧಿಗೆ ಅಧಿಕಾರದ ಗದ್ದುಗೆ ಹಿಡಿದಿದೆ.

ಬಿಜೆಪಿಗೆ18 ಸದಸ್ಯರು,ಶಾಸಕರು, ಸಂಸದ ಹಾಗೂ ವಿಧಾನಸಭಾ ಸದಸ್ಯರು ಸೇರಿ 29 ಸದಸ್ಯ ಬಲವಿದೆ.ಕಾಂಗ್ರೆಸ್‌ನಲ್ಲಿ 21 ಪಾಲಿಕೆ ಸದಸ್ಯರು, ಒಬ್ಬರು ಪಕ್ಷೇತರ, ಒಬ್ಬರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿ 25 ಸದಸ್ಯ ಬಲವಿದೆ.

ಬಿಜೆಪಿಯಿಂದ ಹಾಲಿ ಉಪಮೇಯರ್ ಆಗಿದ್ದ ಶಿಲ್ಪಾ ಜಯಪ್ರಕಾಶ್ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು.ಹೊಸಬರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಜಯಮ್ನ ಅವರನ್ನು ಕಣಕ್ಕಿಳಿಸಿದ್ದರು. ಶಿಲ್ಪಾ ಜಯಪ್ರಕಾಶ್ ಅವರು ಈಗಾಗಲೇ ಉಪಮೇಯರ್ ಆಗಿದ್ದರಿಂದ ಮುಖಂಡರು ಅವರ ಮನವೊಲಿಸಿದ್ದರು.

ಜೆಡಿಎಸ್ ಅಭ್ಯರ್ಥಿ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT