ಸೋಮವಾರ, ಮಾರ್ಚ್ 8, 2021
22 °C

ಸರ್ಕಾರದ ಉಳಿವಿಗೆ ಜೆಡಿಎಸ್‌ನಿಂದ ಉರುಳುಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಾಜ್ಯದ ಮೈತ್ರಿ ಸರ್ಕಾರದ ಉಳಿವಿಗಾಗಿ ಜೆಡಿಎಸ್‌ ಕಾರ್ಯಕರ್ತರು ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಉರುಳುಸೇವೆ ಮಾಡಿದರು.

ಯುವ ಘಟಕದ ಅಧ್ಯಕ್ಷ ಎ. ಶ್ರೀನಿವಾಸ್ ನೇತೃತ್ವದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಕಾರ್ಯಕರ್ತರು ಸರ್ಕಾರ ಸುಭದ್ರವಾಗಿರಲಿ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

‘ಸಮ್ಮಿಶ್ರ ಸರ್ಕಾರಕ್ಕೆ ಬಂದ ಸಂಕಷ್ಟ ದೂರವಾಗಲಿ, ವಿರೋಧಿಗಳ ಕುತಂತ್ರ ಫಲಿಸದಿರಲಿ’ ಎಂದು ಕಾರ್ಯಕರ್ತರು ದೇವರಲ್ಲಿ ಬೇಡಿಕೊಂಡರು.

ಜೆಡಿಎಸ್ ವಕ್ತಾರರಾದ ಖಾದರ್‌ಬಾಷಾ, ಮುಖಂಡ ಅಮಾನುಲ್ಲಾ ಖಾನ್, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಧನಂಜಯ್, ಹನುಮಂತ ರೆಡ್ಡಿ, ಆಕಾಶ್, ಬಸವರಾಜ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.