ಬುಧವಾರ, ಮೇ 18, 2022
28 °C

ಹೊಸಬರಿಗೆ ಅವಕಾಶ ಅಂದ್ರೆ ರೇಣುಕಾಚಾರ್ಯನೂ ಮಂತ್ರಿಯಾಗಲ್ಲ: ಶಾಸಕ ರವೀಂದ್ರನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಹೊಸಬರಿಗೆ ಅವಕಾಶ ಕೊಡಿ ಎಂದು ಕೇಳಲು ಹೋದರೆ ನಾನೂ ಮಂತ್ರಿಯಾಗಲ್ಲ, ರೇಣುಕಾಚಾರ್ಯನೂ ಮಂತ್ರಿಯಾಗಲ್ಲ. ಯಾಕೆಂದರೆ ನಾವು ಹಿಂದೆ ಮಂತ್ರಿಯಾಗಿದ್ದವರು’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ಗುಜರಾತ್‌ ಮಾದರಿ ಆದರೆ ಹಿಂದೆ ಮಂತ್ರಿ ಆದವರು ಯಾರೂ ಮತ್ತೆ ಮಂತ್ರಿ ಆಗಲು ಆಗುವುದಿಲ್ಲ. ಹೊಸಬರಿಗೆ ಅವಕಾಶ ಕೊಡಿ ಎಂದು ರೇಣುಕಾಚಾರ್ಯ ಹೇಳುವುದಾದರೆ ನಾನೂ ಅದೇ
ಮಾತು ಹೇಳುತ್ತೇನೆ’ ಎಂದು ತಿಳಿಸಿದರು.

ನೀವು ಪಕ್ಷ ಕಟ್ಟಿದ ಹಿರಿಯರು ಎಂದು ಸುದ್ದಿಗಾರರು ತಿಳಿಸಿದಾಗ, ‘ಅದೇ ಅಪಾಯ ಈಗ ಆಗಿರೋದು’ ಎಂದು ಪ್ರತಿಕ್ರಿಯಿಸಿದ ಶಾಸಕರು, ‘ನನಗೆ ಮಂತ್ರಿ ಸ್ಥಾನ ನೀಡಿದರೆ ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದುಹೇಳಿದರು.

ಓದಿ... ಮಂತ್ರಿಯಾಗಲು ನಮಗೆ ಅರ್ಹತೆ ಇಲ್ಲವೇ: ರೇಣುಕಾಚಾರ್ಯ ಪ್ರಶ್ನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು