ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಜ್ಜಿಗೆ ವಿತರಣೆ ಆರಂಭಿಸಿದ ಕರುಣಾ ಜೀವ ಟ್ರಸ್ಟ್‌

Last Updated 6 ಏಪ್ರಿಲ್ 2021, 16:08 IST
ಅಕ್ಷರ ಗಾತ್ರ

ದಾವಣಗೆರೆ: ಬಿಸಿಲ ಬೇಗೆಯಲ್ಲಿ ಉಂಟಾಗುವ ದಾಹ ತಣಿಸಲು ಕರುಣಾಜೀವ ಟ್ರಸ್ಟ್‌ನಿಂದ ಮಂಗಳವಾರ ಜಯದೇವ ಸರ್ಕಲ್‌ನಲ್ಲಿ ಮಜ್ಜಿಗೆ ವಿತರಣೆ ಆರಂಭಿಸಿದೆ.

ಮಜ್ಜಿಗೆ ಮತ್ತು ನೀರು ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಕರುಣಾ ಟ್ರಸ್ಟ್ ತನ್ನ ಹೆಸರಿನಂತೆ ಕರುಣೆಯಿಂದ ಬಹಳ ವರ್ಷಗಳಿಂದ ಸಮಾಜಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸದಾ ಕಾಲ ಬಡವರಿಗೆ ಸಹಾಯ, ದೀನ ದುರ್ಬಲರ ಕಲ್ಯಾಣಕ್ಕಾಗಿ ದುಡಿಯುತ್ತಿದೆ’ ಎಂದು ಶ್ಲಾಘಿಸಿದರು.

ಈ ಟ್ರಸ್ಟ್ ತನ್ನ ಎಲ್ಲಾ ಕಾರ್ಯಗಳಿಂದ ಬೇರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಶ್ರೀಮಂತರು, ಉಳ್ಳವರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ತಿಳಿಸಿದರು.

ದಯಾಮರಣ ಹೋರಾಟಗಾರ್ತಿ ಕರಿಬಸಮ್ಮ, ಟ್ರಸ್ಟ್‌ ಅಧ್ಯಕ್ಷ ಸಿ.ಜಿ. ದಿನೇಶ್‍, ಮಾತನಾಡಿದರು. ಬಸವರಾಜ್ ಒಡೆಯರ್ ಸ್ವಾಗತಿಸಿದರು. ಮಂಜುಳಾ ಬಸವಲಿಂಗಪ್ಪ ವಂದಿಸಿದರು. ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಆರ್.ಬಿ. ಪಾಟೀಲ್, ವೀಣಾ ಕುಮಾರ್, ಸೋನು, ಲಿಂಗರಾಜ್, ಸದಾನಂದ, ಸುಮಾ, ರೇಖಾ ವಿಜಯಲಕ್ಷ್ಮಿಭಾಗವಹಿಸಿದ್ದರು.

ಜಯದೇವ ಸರ್ಕಲ್ ಮತ್ತು ರಾಂ ಅಂಡ್ ಕೋ ಸರ್ಕಲ್‍ನಲ್ಲಿ ಪ್ರತಿದಿನ ಮಜ್ಜಿಗೆ ವಿತರಣೆ ಮಾಡಲು ದಿನಕ್ಕೆ ₹ 5,000 ಖರ್ಚಾಗುತ್ತದೆ. ದಾನಿಗಳು ಪಾಟೀಲ್ (6361352381) ಸೋನು (8310520002) ಅವರನ್ನು ಸಂ‍ಪರ್ಕಿಸಬಹುದು ಎಂದು ಟ್ರಸ್ಟ್‌ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT