ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಸಿಇಟಿ ಪರೀಕ್ಷಾ ದಿನಾಂಕ ಬದಲು

ಪ್ರಜಾವಾಣಿ ವರದಿಗೆ ಸ್ಪಂದಿಸಿದ ಕೆಇಎ
Last Updated 1 ಜೂನ್ 2019, 13:31 IST
ಅಕ್ಷರ ಗಾತ್ರ

ದಾವಣಗೆರೆ: ನಾಟ ಪರೀಕ್ಷೆಯ ದಿನವೇ ಡಿಪ್ಲೊಮಾ ಸಿಇಟಿ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿರುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬದಲಾಯಿಸಿದೆ. ಜುಲೈ 7ರ ಬದಲು ಜುಲೈ 14ರಂದು ಪರೀಕ್ಷೆ ನಡೆಯಲಿದೆ.

ಜುಲೈ 7ರಂದು ನಾಟ (ನ್ಯಾಷನಲ್‌ ಆ್ಯಪ್ಟಿಟ್ಯೂಡ್‌ ಆಫ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌) ಪರೀಕ್ಷೆ ನಡೆಸಲು ನವದೆಹಲಿಯ ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ ಅಧಿಸೂಚನೆ ಹೊರಡಿಸಿತ್ತು. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಲ್ಯಾಟರಲ್‌ ಪ್ರವೇಶ ಯೋಜನೆಯಡಿ ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಅದೇ ದಿನ ನಡೆಸಲು ಕೆಇಎ ನಿರ್ಧರಿಸಿತ್ತು. ಎರಡೂ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿತ್ತು. ಈ ಬಗ್ಗೆ ‘ ನಾಟ, ಸಿಇಟಿ ಪರೀಕ್ಷೆ ಒಂದೇ ದಿನ ನಿಗದಿ’ ಎಂಬ ವರದಿಯನ್ನು ಮೇ 28ರಂದು ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಉಂಟಾಗುವ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು.

ಈ ವರದಿಗೆ ಸ್ಪಂದಿಸಿರುವ ಕೆಇಎ ತನ್ನ ಅಧಿಸೂಚನೆಯನ್ನು ಮೇ 31ರಂದು ಪರಿಷ್ಕರಿಸಿದೆ. ಜುಲೈ 7ರ ಬದಲು 14ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ 180 ಅಂಕಗಳ ಪರೀಕ್ಷೆ ಹಾಗೂ ಮಧ್ಯಾಹ್ನ 3ರಿಂದ 4ರವರೆಗೆ ಹೊರನಾಡ ಮತ್ತು ಗಡಿನಾಡ ಕನ್ನಡಿಗರಿಗೆ 50 ಅಂಕಗಳ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ ಎಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT