ಮಾಯಕೊಂಡ: ‘ಸಮಾಜಕ್ಕೆ ಕೊಡುಗೆ ನೀಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಬರಬೇಕು’ ಎಂದು ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ ಪ್ರೈವೆಟ್ ಲಿಮಿಟೆಡ್ನ ಎಜಿಎಂ ಚಂದ್ರಕಾಂತ್ ಪಾಟೀಲ್ ಹೇಳಿದರು.

ಬುಧವಾರ ಇಲ್ಲಿನ ಕೆಪಿಎಸ್ ಕಾಲೇಜಿಗೆ ಕಂಪನಿ ವತಿಯಿಂದ ₹ 10 ಲಕ್ಷ ಮೌಲ್ಯದ ಪೀಠೋಪಕರಣ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಹೊಣೆಯ ಮೂಲಕ ಸಮಾಜಕ್ಕೆ ಕಾಣಿಕೆ ನೀಡಬೇಕು. ಕಂಪನಿಗೆ ಬಂದ ಲಾಭದಲ್ಲಿ ಒಂದಷ್ಟು ಭಾಗವನ್ನು ಸಮಾಜದ ಅಭಿವೃದ್ಧಿಗೆ ನೀಡಲಾಗುತ್ತದೆ. ಮಾಯಕೊಂಡದ ಸರ್ಕಾರಿ ಕಾಲೇಜಿನಲ್ಲಿ ಇಷ್ಟೊಂದು ಮಕ್ಕಳು ಕಲಿಯುತ್ತಿರುವುದು ನೋಡಿದರೆ ಸಂತಸವಾಗುತ್ತದೆ. ನಮ್ಮ ಕಂಪನಿಯಿಂದ ಕೊಡುತ್ತಿರುವ ಕೊಡುಗೆ ಸಾರ್ಥಕವಾಯಿತು. ಕಲಿಸಿದ ಗುರುಗಳು, ಶಾಲೆಯ ಬಗ್ಗೆ ಗೌರವ, ಅಭಿಮಾನ ಹೊಂದಬೇಕು’ ಎಂದು ತಿಳಿಸಿದರು.

ಪ್ರಾಚಾರ್ಯ ಬಸವರಾಜಪ್ಪ, ಕಂಪನಿಯ ಕನ್ಸಲ್ಟೆಂಟ್ ಜಾಹ್ನವಿ, ವಿನಯ್ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯೆ ಸವಿತಾ ಹನುಮಂತಪ್ಪ, ಕೆಪಿಎಸ್ ಉಪಪ್ರಾಚಾರ್ಯ ನಾಗರಾಜಪ್ಪ, ಎಲ್.ಜೆ. ಉಮಾಶಂಕರ್, ಜಿ. ಜಗದೀಶ್, ಪಟ್ಟಣಶೆಟ್ಟಿ ದಯಾನಂದ್, ಪುಟ್ಟರಂಗಸ್ವಾಮಿ, ಹಾಲೇಶ್, ಜಯಣ್ಣ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.