ಬುಧವಾರ, ನವೆಂಬರ್ 30, 2022
21 °C

ಲಕ್ಷ್ಮೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಸಮೀಪದ ಕೋಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ವೈಭವದಿಂದ ಜರುಗಿತು.

ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ನಡೆಯಿತು. ಗಜೇಂದ್ರಮೋಕ್ಷದ ನಂತರ ಉತ್ಸವಮೂರ್ತಿ ಪಲ್ಲಕ್ಕಿ ಉತ್ಸವದ ಗ್ರಾಮ ಪ್ರದಕ್ಷಿಣೆ ಮಾಡಿತು.  ದೇವಾಲಯದ ಯಾಗಶಾಲೆಯಲ್ಲಿ ರಥ ಶಾಂತಿ, ಶ್ರೀಚಕ್ರ ಪೂಜೆ, ಪುಣ್ಯಾಹವಾಚನ, ಹೋಮ ಹವನ ನಡೆದವು. 

ರಾಷ್ಟ್ರಾಶೀರ್ವಾದ, ಮಂತ್ರಪುಷ್ಪ, ವಿಪ್ರ ಸಮುದಾಯದವರ ವೇದಘೋಷ, ಮಂಗಳಾಷ್ಟಕಗಳ ಪಠಣದ ಮಧ್ಯೆ ಅಷ್ಟದಿಕ್ಷಾಲಕರು, ರಥಕ್ಕೆ ಬಲಿ ಹಾಕಿದ ನಂತರ ಉತ್ಸವಮೂರ್ತಿ ರಥಾರೋಹಣದ ನಂತರ ತಹಶೀಲ್ದಾರ್ ಡಾ.ಎಂ.ಬಿ. ಅಶ್ವತ್ಥ್ ರಥಪೂಜೆ ನೆರವೇರಿಸಿದರು.

ಭಕ್ತರು ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿದರು. ‘ಹರಹರ ಮಹಾದೇವ’, ‘ಲಕ್ಷ್ಮೀ ರಮಣ’, ‘ಇಂದಿರಾರಮಣ’, ‘ರಮಾರಮಣ ಗೋವಿಂದ’ ಉದ್ಘೋಷದೊಂದಿಗೆ ತೇರು ಎಳೆದರು.

ಮಂಗಳವಾದ್ಯ, ತಮಟೆ ಮೇಳ, ವಿಪ್ರ ಸಮೂಹದ ವೇದ ಘೋಷ ಮೆರವಣಿಗೆಗೆ ಮೆರುಗು ತಂದಿದ್ದವು. ರಥದಲ್ಲಿನ ಉತ್ಸವಮೂರ್ತಿಗೆ ಬನ್ನಿಪತ್ರೆ, ಹೂ, ಧ್ವಜ ಪತಾಕೆಗಳಿಂದ ರಥ ಹಾಗೂ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು.

ಬಳಿಕ ಜನರು ಬನ್ನಿಪತ್ರೆ ಪಡೆದು ಪರಸ್ಪರ ವಿನಿಮಯ ಮಾಡಿಕೊಂಡರು. ಅನ್ನ ಸಂತರ್ಪಣೆ ನಡೆಯಿತು. ಪೊಲೀಸರು ಭದ್ರತೆ ಒದಗಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು