ಬುಧವಾರ, ಡಿಸೆಂಬರ್ 7, 2022
21 °C

ಮಲೇಬೆನ್ನೂರು: ರಸ್ತೆ ಗುಂಡಿಗೆ ಸಿಕ್ತು ಮುಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು:  ಹೋಬಳಿ ವ್ಯಾಪ್ತಿಯಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ-25ರಲ್ಲಿ ರಸ್ತೆ ದುರಸ್ತಿ ಕಾರ್ಯ ಭಾನುವಾರ ಆರಂಭವಾಗಿದೆ.

ಈ ಬಾರಿಯ ಮಳೆ ಆರ್ಭಟಕ್ಕೆ ಬಹುತೇಕ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿದ್ದವು. ಇದರಿಂದ ಸಂಚಾರ ಕಷ್ಟವಾಗಿದ್ದು, ಸವಾರರು ತೊಂದರೆ ಎದುರಿಸುವಂತಾಗಿದೆ.

ಲೋಕೋಪಯೋಗಿ ಇಲಾಖೆ ಹಾಗೂ ಒಳನಾಡಿ ಬಂದರು ಇಲಾಖೆಯಿಂದ ದುರಸ್ತಿ ಕಾರ್ಯ ಕೈಗೊಂಡಿ‌ದ್ದು, ನಾಗರಿಕರು ಹರ್ಷ ವ್ಯಕ್ತಪಡಿಸಿದರು.

‘ಮೊದಲು ಗುಂಡಿಗಳನ್ನು ಮುಚ್ಚಲಾಗುವುದು. ನಂತರ ಹಾಳಾಗಿರುವ 350 ಮೀ. ಡಾಂಬರ್ ಹಾಕಲಾಗುವುದು’ ಎಂದು ಗುತ್ತಿಗೆದಾರ ಬಿ.ಎಂ.ಜಗದೀಶ್ವರ ಸ್ವಾಮಿ ತಿಳಿಸಿದರು.

ರಾಜ್ಯ ಹೆದ್ದಾರಿ ದುರಸ್ತಿಗೆ, ಪುನರ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಸದ್ಯ ಮಂಜೂರಾತಿ ಸಿಕ್ಕಿರುವ ಸುಮಾರು 4 ಕಿ.ಮೀ. ನಂದಿತಾವರೆಯಿಂದ ಕುಂಬಳೂರುವರೆಗೆ ರಸ್ತೆ ವಿಸ್ತರಿಸಿ ಡಾಂಬರ್ ರಸ್ತೆ ನಿರ್ಮಿಸಲಾಗುವುದು ಎಂದು ಎಂಜಿನಿಯರ್ ಶಿವರುದ್ರಪ್ಪ ಮಾಹಿತಿ ನೀಡಿದರು.

ಕೊಮಾರನಹಳ್ಳಿ ಗುಡ್ಡ ಪ್ರದೇಶದ ರಾಮನಕಟ್ಟೆ ಪ್ರದೇಶದಲ್ಲಿ 6 ತಿರುವುಗಳಲ್ಲಿ ಗುಂಡಿ ಬಿದ್ದಿದ್ದು, ದುರಸ್ತಿ ಮಾಡುವಂತೆ ಸ್ಥಳೀಯರು ಮನವಿ ಮಾಡಿದರು.

'ರಾಜ್ಯ ಹೆದ್ದಾರಿ-25ಕ್ಕೆ ತೇಪೆ ಹಾಕುವ ಬದಲಿಗೆ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಹಾಗೂ ಹರಿಹರ ಶಿವಮೊಗ್ಗ ರೈಲು ಮಾರ್ಗ ಮಹತ್ವಾಕಾಂಕ್ಷಿ ಯೋಜನೆ ನನೆಗುದಿಗೆ ಬಿದ್ದಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಶಾಸಕರು, ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು' ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬಿದ್ ಅಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಪಟೇಲ್ ಮಂಜುನಾಥ್ ಕೋಮಾರನಹಳ್ಳಿ ಒತ್ತಾಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು