ತಾಯಿ, ತಂಗಿ ಕೊಲೆ: ಆರೋಪಿ ಬಂಧನ
ಪ್ರಜಾವಾಣಿ ವಾರ್ತೆ
ದಾವಣಗೆರೆ: ಮಲೇಬೆನ್ನೂರು ಸಮೀಪದ ಯಕ್ಕೆಗೊಂದಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಮಾಡಿದ ಆರೋಪಿಯನ್ನು ಹರಿಹರ ಬೈಪಾಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಕೆ.ಭರಮಗೌಡ ಅಲಿಯಾಸ್ ಭರಮನಗೌಡ (43) ಬಂಧಿತ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆಸ್ತಿ ಪಾಲು ಮಾಡಿಕೊಡುವ ವಿಚಾರದಲ್ಲಿನ ವೈಷಮ್ಯದಿಂದಾಗಿ ತಾಯಿ ಸರೋಜಮ್ಮ ಹಾಗೂ ಸಹೋದರಿ ಜ್ಯೋತಿ ಅವರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಭರಮಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಸ್ತಿ ವಿವಾದ ಕೋರ್ಟಿನಲ್ಲಿ ವಿಚಾರಣೆ ಇದ್ದು, ವಿಚಾರಣೆ ಮುಗಿಸಿಕೊಂಡು ಬರುತ್ತಿದ್ದವರ ಮೇಲೆ ಟ್ರಾಕ್ಟರ್ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ. ಜ್ಯೋತಿ ಅವರ ಪತಿ ಶಿವರಾಜ ಅವರ ದೂರಿನ ಮೇರೆಗೆ ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತಂಡ ರಚನೆ: ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ಜಜ, ಹರಿಹರ ವೃತ್ತದ ಸಿಪಿಐ (ಪ್ರಭಾರ) ಜೆ.ಲಕ್ಷ್ಮಣ್ ಅವರ ನೇತೃತ್ವದಲ್ಲಿ ಮಲೇಬೆನ್ನೂರು ಪಿಎಸ್‌ಐ ವೀರಬಸಪ್ಪ ಕುಸಲಾಪುರ, ಸಿಬ್ಬಂದಿ ಬಸವರಾಜ್, ಎಚ್.ಜಿ. ಸಂತೋಷ್‌ಕುಮಾರ್, ರಾಜಶೇಖರ್, ಮೂರ್ತಿ ಜೆ.ಎಸ್, ಶಿವಕುಮಾರ್ ಕೆ, ನಾಗಪ್ಪ ಕಡೆಮನಿ, ಮೊಹ್ಮದ್ ಇಲಿಯಾಸ್ ಹಾಗೂ ನಾಗರಾಜ್ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್ಪಿ ಎಂ.ರಾಜೀವ್ ಅವರು ತಂಡದ ಕಾರ್ಯಕ್ಕೆ ಪ್ರಶಂಸೆ
ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.