ನ್ಯಾಮತಿ: ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿಯ 6ನೇ ದಿನವಾದ ಶುಕ್ರವಾರ ದೇವಿ ಪೂಜೆಯನ್ನು ನೆರವೇರಿಸಿ 118 ಮಂದಿ ಮುತ್ತೈದೆಯರಿಗೆ ಬಾಗಿನ ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು.
ಲಲಿತಾ ಸಹಸ್ರ ನಾಮಾವಳಿ ಸಮಿತಿ ಸದಸ್ಯೆಯರು ದೇವಿ ಅಷ್ಟೋತ್ತರ, ಮಹಾ ಮಂಗಳಾರತಿ, ಕುಂಕುಮಾರ್ಚನೆ, ಸಹಸ್ರ ನಾಮವಾಳಿ ಜಪಿಸಿದರು.
ಆಂಜನೇಯಸ್ವಾಮಿ ಅರ್ಚಕ ಜಯಲಿಂಗಸ್ವಾಮಿ, ಶಿವಮೊಗ್ಗ ವಿಶ್ವನಾಥಯ್ಯ, ದೇವಸ್ಥಾನದ ಅರ್ಚಕ ಪೂಜಾರಿ ಪುಟ್ಟಪ್ಪ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ದೇವಸ್ಥಾನ ಸಮಿತಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.