ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಂಕಷ್ಟಕ್ಕೆ ಶಾಸಕರ ನೆರವಿನ ಹಸ್ತ

Last Updated 2 ಆಗಸ್ಟ್ 2021, 2:28 IST
ಅಕ್ಷರ ಗಾತ್ರ

ಹರಿಹರ: ಆಟೊ ಚಾಲಕರಿಗೆ ಕೋವಿಡ್‍ ಸಂಕಷ್ಟ ಕಾಲದಲ್ಲಿ ನೆರವು ನೀಡುವ ಸದುದ್ದೇಶದಿಂದ ಕಿಟ್‍ ವಿತರಿಸಲಾಗುತ್ತಿದೆ ಎಂದು ಶಾಸಕ ಎಸ್‍. ರಾಮಪ್ಪ ತಿಳಿಸಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶಾಸಕ ಎಸ್‍. ರಾಮಪ್ಪ ಅವರು ಆಟೊ ಚಾಲಕರಿಗೆ ದಿನಸಿ ಕಿಟ್‍ ವಿತರಿಸಿ ಮಾತನಾಡಿದರು.

‘ಪರಿಹಾರ ಹಾಗೂ ಅನುದಾನ ವಿತರಣೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ನನ್ನ ಕ್ಷೇತ್ರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನೆರೆ ಹಾಗೂ ಅತಿವೃಷ್ಟಿ ಹಾನಿಯ ಪರಿಹಾರ ವಿತರಣೆಯಲ್ಲಿ ತಾರತಮ್ಯವಾದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕೋವಿಡ್‍ 3ನೇ ಅಲೆಯ ಭೀತಿ ರಾಜ್ಯವನ್ನು ಕಾಡುತ್ತಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ ಸೋಂಕಿತರ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಒದಗಿಸಬೇಕು. ಕಳೆದ ಬಾರಿ ಜಿಲ್ಲಾಡಳಿತ ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮುಚ್ಚಿಡುವ ಮೂಲಕ, ಬಡ ಕುಟುಂಬಗಳಿಗೆ ಪರಿಹಾರ ದೊರೆಯದಂತೆ ಮಾಡಿದೆ ಎಂದು ಆರೋಪಿಸಿದರು.

ನಗರಸಭೆ ಉಪಾಧ್ಯಕ್ಷ ಎಂ.ಎಸ್‍. ಬಾಬುಲಾಲ್‍, ಬ್ಲಾಕ್‍ ಕಾಂಗ್ರೆಸ್‍ ನಗರ ಘಟಕ ಅಧ್ಯಕ್ಷ ಎಲ್‍.ಬಿ. ಹನುಮಂತಪ್ಪ, ಗ್ರಾಮಾಂತರ ಘಟಕದ ಅಧ್ಯಕ್ಷ ಅಬಿದ್‍ ಅಲಿ, ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಚಾಲಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT