ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಲ್ಲಿ ಸೋಮವಾರ ಬರಗಾಲದ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾದ ಹರಜಾತ್ರೆಯ ಸಂದರ್ಭ ನಡೆದ ಅಕ್ಕಮಹಾದೇವಿ ವಚನಗಳ ಪಲ್ಲಕ್ಕಿ ಉತ್ಸವದಲ್ಲಿ ವಚನಾನಂದ ಸ್ವಾಮೀಜಿ ಜಮಖಂಡಿ ಅಲಗೂರು ಗುರುಪೀಠದ ಶ್ರೀಗಳು ಹಾಗೂ ಸಮುದಾಯದ ಮುಖಂಡರು ಇದ್ದರು.
ವೀರಶೈವ ಲಿಂಗಾಯತರೆಲ್ಲರೂ ಹಿಂದೂಗಳು. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಅಂದು ರಾಮನವಮಿ ಎಂದೇ ಭಾವಿಸಿ ಪೂಜೆ ಸಲ್ಲಿಸಬೇಕು.