ಶನಿವಾರ, ಜೂನ್ 12, 2021
28 °C

ದಾವಣಗೆರೆ | ನಾಮಫಲಕ ಅನಾವರಣ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಲ್ಲಿನ ಮಹಾನಗರಪಾಲಿಕೆಯ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹದಡಿ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಸೇರುವ ರಸ್ತೆಗೆ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ರಸ್ತೆ’ ಹಾಗೂ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿರ್ಮಿಸಿರುವ ವೃತ್ತಕ್ಕೆ ‘ತರಳಬಾಳು ವೃತ್ತ’ ಎಂದು ಗುರುವಾರ ನಾಮಕರಣ ಮಾಡಲಾಯಿತು.

ನಾಮಫಲಕಗಳನ್ನು ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಶಾಸಕ ಎಸ್.ಎ. ರವೀಂದ್ರನಾಥ್ ಅನಾವರಣಗೊಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ‘ಬಹಳ ವರ್ಷಗಳ ಹಿಂದೆಯೇ ಭಾರತೀಯ ಜನತಾ ಪಕ್ಷವು ಈ ರಸ್ತೆ ಮತ್ತು ವೃತ್ತಕ್ಕೆ ಮಾಗನೂರು ಬಸಪ್ಪ ರಸ್ತೆ ಹಾಗೂ ತರಳುಬಾಳು ವೃತ್ತ ಎಂದು ಹೆಸರಿಡಲು ಸರ್ಕಾರಕ್ಕೆ ಮಹಾನಗರಪಾಲಿಕೆಯಿಂದ ಶಿಫಾರಸು ಮಾಡಿ ಕಳುಹಿಸಲಾಗಿತ್ತು. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಇದು ಮಂಜೂರಾಗಿತ್ತು. ಸರ್ಕಾರದಿಂದ ಒಪ್ಪಿಗೆ ಬಂದು ಏಳು ವರ್ಷವಾಗಿದ್ದರೂ ಹೆಸರಿಡಲು ಕಾಲ ಕೂಡಿ ಬಂದಿರಲಿಲ್ಲ. ಈಗ ಮತ್ತೆ ಬಿಜೆಪಿ ಸರ್ಕಾರ ಬಂದಿದ್ದರಿಂದ ಅವಕಾಶ ಕೂಡಿಬಂದಿದೆ’ ಎಂದು ಹೇಳಿದರು.

‘ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಾಡಿನ ಹೆಮ್ಮೆಯ ಗುರುಗಳು. ಈ ಕಾರಣ ‌‌‌ವೃತ್ತಕ್ಕೆ ತರಳಬಾಳು ಎಂದು ಹೆಸರು ಇಟ್ಟಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಆರೂಢ ದಾಸೋಹಿಯಾಗಿ ಮಾಗನೂರು ಬಸಪ್ಪನವರು ಜಿಲ್ಲೆ ಮಾತ್ರವಲ್ಲದೇ ಇತರ ಕಡೆಗಳಲ್ಲಿಯೂ ದಾನ ಧರ್ಮ ಮಾಡಿ ಹೆಸರುಗಳಿಸಿದ್ದರು. ಅವರ ಹೆಸರನ್ನು  ರಸ್ತೆಗೆ ಇಟ್ಟಿರುವುದು ಸೂಕ್ತವಾಗಿದೆ’ ಎಂದು ಸಂತಸ ಹಂಚಿಕೊಂಡ‌ರು.

ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್, ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಂಜುನಾಥ್ ಕುರ್ಕಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಸದಸ್ಯರಾದ ಎಸ್.ಟಿ. ವೀರೇಶ್, ಎಸ್. ಮಂಜುನಾಥ್, ಅಬ್ದುಲ್ ಲತೀಫ್, ಶ್ವೇತಾ ಶ್ರೀನಿವಾಸ್, ಗೀತಾ ನಾಗರಾಜ, ಗೀತಾ ದಿಳ್ಯೆಪ್ಪ, ಮಾಗನೂರು ಸಂಗಮೇಶ ಗೌಡ, ಚಂದ್ರಶೇಖರ್ ಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು