ಸೋಮವಾರ, ಜೂನ್ 27, 2022
28 °C
ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿಕೆ

ಯಾವ ಪತ್ರಕ್ಕೂ ಸಹಿ ಹಾಕಿಲ್ಲ, ಬಿಜೆಪಿ ಪರ ಇದ್ದೇನೆ: ಕರುಣಾಕರ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ‘ಯಾವ ಪತ್ರಕ್ಕೂ ಸಹಿ ಮಾಡಿಲ್ಲ, ನಾನು ಯಾರ ಪರವಾಗಿಯೂ ಇಲ್ಲ. ಬಿಜೆಪಿ ಪರವಾಗಿದ್ದೇನೆ’ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘160 ಜನ ಶಾಸಕರು ಸಹಿ ಮಾಡಿದ್ದಾರೆ ಎನ್ನುವ ಹೇಳಿಕೆ ನನಗೆ ಗೊತ್ತಿಲ್ಲ. ಬಿಜೆಪಿ ಹಿಂದೆ ಇಬ್ಭಾಗವಾದಾಗಲೂ ಆ ಪಕ್ಷದಲ್ಲಿಯೇ ಇದ್ದೆ. ಈಗಲೂ ಮತ್ತು ಮುಂದೆಯೂ ಬಿಜೆಪಿಯಲ್ಲಿರುತ್ತೇನೆ. ಬಿ.ಎಸ್.ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ. ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆಯೇ ಇಲ್ಲವೋ ಎಂಬ ಬಗ್ಗೆ ಹೇಳಲು ನಾನು ಜೋತಿಷಿ ಅಲ್ಲ’ ಎಂದು ಹೇಳಿದರು.

‘ನನಗೂ ಕೋವಿಡ್ ಪಾಸಿಟಿವ್ ಆಗಿ ಬಳ್ಳಾರಿ ಮನೆಯಲ್ಲಿದ್ದೆ. ಬೆಂಗಳೂರಿಗೆ ಹೋಗಲು ಆಗಿಲ್ಲ. ಸಿಎಂ ಸ್ಥಾನ ಬದಲಾವಣೆಗಿಂತ ನನ್ನ ಕ್ಷೇತ್ರದ ಜನರ ಆರೋಗ್ಯ ಮುಖ್ಯ. ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಂಡಿದ್ದೇನೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ್, ಸಂತೋಷ್, ನಿಟ್ಟೂರು ಸಣ್ಣಹಾಲಪ್ಪ, ಆರ್. ಲೋಕೇಶ್, ಶೇಖರಪ್ಪ, ಬಾಗಳಿ ಕೊಟ್ರೇಶಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು