ಭಾನುವಾರ, ಆಗಸ್ಟ್ 1, 2021
27 °C
338ಕ್ಕೇರಿದ ಸೋಂಕಿತರ ಸಂಖ್ಯೆ*13 ಮಂದಿ ಬಿಡುಗಡೆ

ಕೋವಿಡ್‌ನಿಂದ ವೃದ್ಧ ಸಾವು: 5 ಹೊಸ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೋವಿಡ್–19ನಿಂದ ಬೇತೂರು ರಸ್ತೆಯ 80 ವರ್ಷದ ವೃದ್ಧ (ಪಿ.16675) ಗುರುವಾರ ಮೃತಪಟ್ಟಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿದೆ. ಶುಕ್ರವಾರ ಐದು ಜನರಿಗೆ ಸೋಂಕು ತಗುಲಿದೆ. 13 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ರ‍್ಯಾಂಡಮ್ ಟೆಸ್ಟ್ ವೇಳೆ ಇವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಿಗೆ ಹೈಪರ್‌ಟೆನ್ಷನ್, ಸಿಒಪಿಡಿ ( ಕ್ರಾನಿಕ್‌ ಆಬ್ಸಟ್ರಕ್ವಿವ್‌ ಪಲ್ಮನರಿ ಡಿಸೀಸ್‌) ಕಾಯಿಲೆಯಿಂದ ಬಳಲುತ್ತಿದ್ದರು. ಜೂನ್ 24ರಂದು ಆಸ್ಪತ್ರೆಗೆ ದಾಖಲಾಗಿದ್ದು, ಜುಲೈ 1ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಜುಲೈ 2ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆಯ 63 ವರ್ಷದ ವೃದ್ಧ (ಪಿ.18100) ಹಾಗೂ ಇವರ ಪುತ್ರ 27 ವರ್ಷದ ಪುತ್ರ (ಪಿ.18101) ಇವರಿಗೆ ನ್ಯಾಮತಿ ತಾಲ್ಲೂಕಿನ ದೊಡ್ಡೇರಿ ಗ್ರಾಮದ 38 ವರ್ಷದ ವ್ಯಕ್ತಿಯಿಂದ (ಪಿ.13222) ಸೋಂಕು ತಗುಲಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಆಜಾದ್‌ನಗರದ 68 ವರ್ಷದ ವೃದ್ಧ (ಪಿ.18102), ಹರಪನಹಳ್ಳಿ ತಾಲ್ಲೂಕಿನ ಭಾರತಿನಗರದ 49 ವರ್ಷದ ಪುರುಷ (ಪಿ.18103) ಹಾಗೂ ಹಾವೇರಿ ತಾಲ್ಲೂಕಿನ ಕನವಳ್ಳಿಯ 60 ವರ್ಷದ ಪುರುಷ (ಪಿ.18104)ನಿಗೆ ಕೊರೊನಾ ವೈರಸ್ ತಗುಲಿದೆ.

13 ಮಂದಿ ಬಿಡುಗಡೆ: ಕೋವಿಡ್‌ ಆಸ್ಪತ್ರೆಯಿಂದ ಶುಕ್ರವಾರ 13 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ದಾವಣಗೆರೆಯ ಮಹಾರಾಜಪೇಟೆಯ 68 ವರ್ಷದ ಪುರುಷ (ಪಿ.9421), ಮಾಗಾನಹಳ್ಳಿಯ 32 ವರ್ಷದ ಮಹಿಳೆ (ಪಿ.10391), ಹರಿಹರ ಇಂದಿರಾನಗರದ 39 ವರ್ಷದ ಮಹಿಳೆ (ಪಿ.11156), ಚನ್ನಗಿರಿ ಕುಂಬಾರ ಬೀದಿಯ 60 ವರ್ಷದ ಮಹಿಳೆ (ಪಿ.11159), ಹಾಗೂ ಹರಿಹರದ ಅಗಸರ ಬೀದಿಯ 34 ವರ್ಷದ ಮಹಿಳೆ (ಪಿ.11160) ಹಾಗೂ 45 ವರ್ಷದ ಪುರುಷ (ಪಿ.11161) ಬಿಡುಗಡೆ ಹೊಂದಿದ್ದಾರೆ.

ದಾವಣಗೆರೆ ಪಿ.ಜೆ.ಬಡಾವಣೆಯ 13ನೇ ಕ್ರಾಸ್‌ನ 37 ವರ್ಷದ ಪುರುಷ (ಪಿ.11950) ಹಾಗೂ 30 ವರ್ಷದ ಮಹಿಳೆ (ಪಿ.11952) ಹಗೆದಿಬ್ಬ ಸರ್ಕಲ್‌ನ 68 ವರ್ಷದ ವೃದ್ಧ (ಪಿ.11954), ಹರಿಹರ ಗಂಗಾನಗರದ 65 ವರ್ಷದ ಪುರುಷ (ಪಿ.11955) ಹರಿಹರ ಅಗಸರ ಬೀದಿಯ 40 ವರ್ಷದ ಮಹಿಳೆ (14400) ಹಾಗೂ 16 ವರ್ಷದ ಬಾಲಕಿ (14401) ಹಾಗೂ ನ್ಯಾಮತಿ ಟ್ಯಾಗೋರ್ ರಸ್ತೆಯ 65 ವರ್ಷದ ಪುರುಷ (ಪಿ.15386) ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 338 ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ 44 ಸಕ್ರಿಯ ಪ್ರಕರಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು