ಸೋಮವಾರ, ಜನವರಿ 20, 2020
19 °C

10ರಂದು ‘ಜಯದೇವ ಶ್ರೀ’, ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 63ನೇ ಸ್ಮರಣೋತ್ಸವ ಅಂಗವಾಗಿ ಜ.10ರಂದು ‘ಜಯದೇವ ಶ್ರೀ’, ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಅವರಿಗೆ ‘ಜಯದೇವ ಶ್ರೀ’, ಬೆಂಗಳೂರಿನ ಉದ್ಯಮಿ ಎಚ್.ಸಿ. ಪ್ರಭಾಕರ್‌ಗೆ ‘ಶೂನ್ಯಪೀಠ ಅಲ್ಲಮ’, ಹೊಳಲ್ಕೆರೆಯ ವೈದ್ಯ ಡಾ. ನಾಗರಾಜ್‌ ಬಿ. ಸಜ್ಜನ್‌ಗೆ ‘ಶೂನ್ಯಪೀಠ ಚನ್ನಬಸವ’, ಬೀದರ್‌ನ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಸ್ಮರಣೋತ್ಸವ ಅಂಗವಾಗಿ 10, 11, 12ರಂದು ಜನಜಾಗೃತಿ ಪಾದಯಾತ್ರೆ, ಜಮುರಾ ನಾಟಕೋತ್ಸವ, ಮಹಿಳಾ ಸಮಾವೇಶ ಸೇರಿ ವಿವಿಧ ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು