ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟಿದ ದೇಶದಲ್ಲಿದ್ದೇ ಯಶಸ್ಸು ಗಳಿಸಲು ಪ್ರಯತ್ನಿಸಬೇಕು

ಉದ್ಯಮಿ ವಿಜಯ ಸಂಕೇಶ್ವರ ಅಭಿಮತ
Last Updated 29 ಡಿಸೆಂಬರ್ 2022, 4:42 IST
ಅಕ್ಷರ ಗಾತ್ರ

ಸಾಗರ: ಪ್ರತಿಭೆಯುಳ್ಳ ಪ್ರತಿಯೊಬ್ಬರೂ ವಿದೇಶಕ್ಕೆ ಹೋಗಿ ಯಶಸ್ಸು ಗಳಿಸುವ ಬದಲು ಹುಟ್ಟಿದ ದೇಶದಲ್ಲಿದ್ದುಕೊಂಡೇ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಾಣಲು ಪ್ರಯತ್ನಿಸಬೇಕು ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.

ಇಲ್ಲಿನ ಶೃಂಗೇರಿ ಶಂಕರ ಮಠದಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಹಣದಿಂದ ಯಶಸ್ಸು ದೊರಕುತ್ತದೆ ಎಂಬ ಮನೋಭಾವ ಸರಿಯಲ್ಲ. ಸತತ ಪರಿಶ್ರಮವಿದ್ದರೆ ಹಣದ ಜೊತೆಗೆ ಯಶಸ್ಸು ಕೂಡ ನಮ್ಮನ್ನು ಹಿಂಬಾಲಿಸುತ್ತದೆ.ಜೀವನದಲ್ಲಿ ನಾವು ವೈಯುಕ್ತಿಕವಾಗಿ ಯಶಸ್ಸು ಗಳಿಸಿದರೆ ಸಾಲದು. ಅದರ ಜೊತೆಗೆ ಮತ್ತೊಬ್ಬರು ಬದುಕು ಕಟ್ಟಿಕೊಳ್ಳಲು ನೆರವಾದರೆ ನಮ್ಮ ಬದುಕು ಸಾರ್ಥಕಗೊಂಡಂತೆ’ ಎಂದರು.

ಯುವಜನರು ಪ್ರತಿಯೊಂದಕ್ಕೂ ನೆಪ ಹೇಳುವುದನ್ನು, ಇತರರನ್ನು ದೂಷಿಸುವುದನ್ನು ಬಿಟ್ಟು ಸ್ವಂತ ಸಾಮರ್ಥ್ಯದ ಮೇಲೆ ಜೀವನವನ್ನು ರೂಪಿಸಿಕೊಳ್ಳುವ ಕುರಿತು ಚಿಂತನೆ ನಡೆಸಬೇಕು ಎಂದು ಅವರು ಕಿವಿಮಾತು ಹೇಳಿದರು.

ವರ್ತಕ ಮಧುಕರ ನರಸಿಂಹ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್.ಜಿ.ಶ್ಯಾನುಭಾಗ್, ಟಿ.ವಿ.ಪಾಂಡುರಂಗ, ಬಿ.ಎಚ್.ಲಿಂಗರಾಜ್, ಬಸವರಾಜ್,ಮ.ಸ.ನಂಜುಂಡಸ್ವಾಮಿ, ಅಶ್ವಿನಿಕುಮಾರ್, ಬದರಿನಾಥ್‌, ಸದಾನಂದ ಶರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT