ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಆಕ್ಸಿಮೀಟರ್ ಮಾರಾಟಗಾರರಿಗೆ ದಂಡ

Last Updated 19 ಮೇ 2021, 13:27 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸಂಕಷ್ಟದ ಕಾಲದಲ್ಲಿ ಆಕ್ಸಿಮೀಟರ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಅನಧಿಕೃತ ಅಂಗಡಿಗಳಿಗೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದರು. ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.

ತಯಾರಕರ, ಆಮದುದಾರರ ಪೂರ್ಣವಿಳಾಸ, ಗ್ರಾಹಕರು ಸಂಪರ್ಕಿಸಬಹುದಾದ ದೂರವಾಣಿ, ಆಮದಾದ, ತಯಾರಾದ ತಿಂಗಳು, ವರ್ಷ, ಈ ಎಲ್ಲಾ ಕಡ್ಡಾಯ ಘೋಷಣೆಗಳು ಇರಬೇಕು. ಈ ಯಾವ ನಿಯಮಗಳೂ ಇಲ್ಲದೇ ನಗರದ ಪ್ರಮುಖ ಫಾರ್ಮಸಿ ಹಾಗೂ ಸರ್ಜಿಕಲ್ ಷಾಪ್‍ಗಳಲ್ಲಿ ಆಕ್ಸಿಮೀಟರ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅವುಗಳಿಗೆ ₹ 40 ಸಾವಿರ ದಂಡ ವಿಧಿಸಲಾಗಿದೆ. ಇದಲ್ಲದೇ ಕಿರಾಣಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಅಧಿಕ ಬೆಲೆಗೆ ಮಾರಾಟ ಮಾಡುವುದುನ್ನ ಪತ್ತೆ ಹಚ್ಚು ದಂಡ ವಿಧಿಸಿದ್ದಾರೆ.

ಫಾರ್ಮಸಿ, ಸರ್ಜಿಕಲ್ಸ್, ನ್ಯಾಯಬೆಲೆ ಅಂಗಡಿಗಳು, ಕಿರಾಣಿ ಅಂಗಡಿಗಳು ಹೀಗೆ 50ಕ್ಕೂ ಹೆಚ್ಚು ವಿಶೇಷ ತಪಾಸಣೆಗಳನ್ನು ನಡೆಸಲಾಯಿತು. 16 ಮೊಕದ್ದಮೆಗಳನ್ನು ದಾಖಲಿಸಿ ₹ 80 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೆ ಸಂಬಂಧಿಸಿದ ವ್ಯಾಪಾರಿ ಸಮುದಾಯಕ್ಕೆ ನೈತಿಕ ವ್ಯಾಪಾರಧರ್ಮ ಪಾಲಿಸುವಂತೆ ಎಚ್ಚರಿಕೆ ನೀಡಿ ಗ್ರಾಹಕರರಿಗೆ ಸಂಭವಿಸಬಹುದಾದ ಮೋಸವನ್ನು ತಡೆಗಟ್ಟುವ ನಿಟ್ಟಿನಲ್ಲಿ ತೀವ್ರ ನಿಗಾವಹಿಸಲಾಗಿದೆ. ದೂರುಗಳಿಗೆ 8050024760 ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿಯಂತ್ರಕ ಎಚ್.ಎಸ್. ರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT