ಬುಧವಾರ, ಜನವರಿ 29, 2020
29 °C

ಪ್ರತಿಭಟನೆಗೆ ಪೊಲೀಸರ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಕಮ್ಯುನಿಸ್ಟ್‌ ಹಾಗೂ ಬೀಡಿ ಕಾರ್ಮಿಕರ ಸಂಘಟನೆ ಸದಸ್ಯರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸಿದರು.

ಇಲ್ಲಿನ ಜಯದೇವ ಸರ್ಕಲ್‌ನಲ್ಲಿ ಗುರುವಾರ ಪ್ರತಿಭಟನೆಗೆ ಕಾರ್ಮಿಕರು ಮುಂದಾದಾಗ, ‘ನಗರದಲ್ಲಿ ಡಿ.21ರವರೆಗೆ ನಿಷೇಧಾಜ್ಞೆ ಜಾರಿ ಇದ್ದು, ಪ್ರತಿಭಟನೆ ಮಾಡುವಂತಿಲ್ಲ. ಅಗತ್ಯ ಇದ್ದರೆ ಸಂಘಟನೆ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿ. ಇದನ್ನು ಮೀರಿ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದರು.

ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿದರು. ಬಳಿಕ ಪ್ರತಿಭಟನಕಾರರು ವಾಪಸಾದರು. 

ಪ್ರತಿಕ್ರಿಯಿಸಿ (+)