ಚನ್ನಗಿರಿಯಲ್ಲಿ ಉತ್ತಮ ಮಳೆ

7

ಚನ್ನಗಿರಿಯಲ್ಲಿ ಉತ್ತಮ ಮಳೆ

Published:
Updated:
Deccan Herald

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಚದುರಿದಂತೆ ಮಳೆಯಾಗಿದ್ದು, ರೈತರ ಮೊಗದಲ್ಲಿ ಆಶಾ ಭಾವನೆ ಮೂಡಿದೆ. 15–20 ದಿನಗಳಿಂದ ಮಳೆ ಇಲ್ಲದೇ ಕಂಗಲಾಗಿದ್ದ ರೈತರಿಗೆ ತುಸು ಸಂತೋಷವಾಗಿದೆ.

15 ದಿನಗಳಿಂದ ಮಳೆ ಬಾರದೇ ಮೆಕ್ಕೆಜೋಳ, ಹತ್ತಿ, ಶೇಂಗಾ, ಹೆಸರು, ಎಳ್ಳು, ಅಲಸಂದೆ, ತೊಗರಿ, ರಾಗಿ ಬೆಳೆಗಳು ಒಣಗುವ ಹಂತದಲ್ಲಿದ್ದವು. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮೆಕ್ಕೆಜೋಳವನ್ನು ಈ ಬಾರಿ 23,045 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಮೆಕ್ಕೆಜೋಳ ಸೂಲಂಗಿ ಬಿಟ್ಟು ಕಾಳು ಕಟ್ಟುವ ಹಂತದಲ್ಲಿದ್ದವು. ಈ ಬೆಳೆಗಳಿಗೆ ಅಗತ್ಯವಾಗಿ ಮಳೆ ಬೇಕಾಗಿತ್ತು. ಎರಡು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಬೆಳೆಗಳು ಚೇತರಿಸಿಕೊಂಡು ಕಾಳುಕಟ್ಟುವ ಹಂತದಲ್ಲಿ ನಳನಳಿಸುತ್ತಿವೆ.

 ‘ಈ ಸಮಯದಲ್ಲಿ ಮಳೆ ಬಾರದೇ ಇದ್ದರೆ ಸಂಪೂರ್ಣವಾಗಿ ಬೆಳೆಗಳು ಒಣಗಿ ಹೋಗುತ್ತಿದ್ದವು. ಮತ್ತೆ ರೈತರು ಸಾಲದ ಕೂಪಕ್ಕೆ ಬೀಳುವಂತಾಗಿತ್ತು. ದೊಡ್ಡ ಪ್ರಮಾಣದಲ್ಲಿ ಮಳೆ ಬೀಳದಿದ್ದರೂ ಮಕ್ಕಳ ಬೆಳವಣಿಗೆ ಅಗತ್ಯ ಪ್ರಮಾಣದಲ್ಲಿ ಮಳೆ ಬೀಳುತ್ತಿದ್ದು, ಬೆಳೆಗಳು ಚೇತರಿಸಿಕೊಳ್ಳುತ್ತಿವೆ’ ಎಂದು ನುಗ್ಗಿಹಳ್ಳಿ ಗ್ರಾಮದ ಸಿದ್ದಪ್ಪ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !