ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ: ಭೀಮಸಮುದ್ರ ಪ್ರವೇಶಿಸಿದ ‘ಮಂತ್ರಾಕ್ಷತೆ’

Published 1 ಜನವರಿ 2024, 15:21 IST
Last Updated 1 ಜನವರಿ 2024, 15:21 IST
ಅಕ್ಷರ ಗಾತ್ರ

ಸಿರಿಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ, ಭಾವಚಿತ್ರ ಮತ್ತು ಕರಪತ್ರಗಳು ಭೀಮಸಮುದ್ರವನ್ನು ತಲುಪಿದಾಗ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು. ಬಸ್‌ ನಿಲ್ದಾಣದಿಂದ ಈಶ್ವರ ದೇವಾಲಯದವರೆಗೆ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ಹಿರೇಗುಂಟನೂರು ಹೋಬಳಿಯ ಪ್ರತಿ ಮನೆಗೂ ವಿತರಿಸಲು ಮಂತ್ರಾಕ್ಷತೆ, ಭಾವಚಿತ್ರ ಮತ್ತು ಕರಪತ್ರಗಳು ಗ್ರಾಮಕ್ಕೆ ಬಂದಿವೆ ಎಂದು ಹಿಂದೂ ಕಾರ್ಯಕರ್ತರು ತಿಳಿಸಿದರು.

ಮಂತ್ರಾಕ್ಷತೆ ಪುರಪ್ರವೇಶ ಹಾಗೂ ಮೆರವಣಿಗೆ ಕಾರ್ಯಕ್ರಮದಲ್ಲಿ ಮಂತ್ರಾಕ್ಷತೆ ಕಾರ್ಯಕ್ರಮದ ಜಿಲ್ಲಾ ಹಾಗೂ ಗ್ರಾಮಾಂತರ ತಂಡದ ಪ್ರಮುಖರಾದ ದೇವರಾಜ್ ಕೋಟ್ಲಾ, ರುದ್ರೇಶ್, ನಂದಿ ನಾಗರಾಜ್, ವೀರೇಶ್ ಜಾಳಿಕಟ್ಟೆ, ಕಲ್ಲೇಶಯ್ಯ ಹಾಗೂ ಭೀಮಸಮುದ್ರ ಗ್ರಾಮದ ಮಂತ್ರಾಕ್ಷತೆ ಕಾರ್ಯಕ್ರಮದ ಮುಖಂಡರಾದ ಮಹೇಶ್, ಮಲ್ಲಿಕಾರ್ಜುನ್, ಅಶೋಕ್, ಕುಮಾರ್, ಮಾನಂಗಿ ಜಯಪ್ಪ ಹಾಗೂ ಕಡ್ಲೆಗುದ್ದು ಭೀಮಸಮುದ್ರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT