ದಾವಣಗೆರೆ: ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ಮಂಡಿಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಗುರುವಾರ ಯಶಸ್ವಿಯಾಯಿತು. ಸೇವೆ ಆರಂಭವಾದ ಮೊದಲ ದಿನವೇ ರೋಬೋಟಿಕ್ ತಂತ್ರಜ್ಞಾನದಲ್ಲಿ ಆಸ್ಪತ್ರೆಯು ಹೊಸ ಮೈಲುಗಲ್ಲು ರೂಪಿಸಿತು.

ಬೆಂಗಳೂರಿನ ಮಂಡಿಕೀಲು ಬದಲಾವಣೆ ತಜ್ಞ ಡಾ.ಎ.ಪಿ. ಲಿಂಗರಾಜ್, ಆರೈಕೆ ಆಸ್ಪತ್ರೆಯ ಡಾ.ಧ್ರುವ ವಿ. ಹಾಗೂ ಅರಿವಳಿಕೆ ತಜ್ಞರಾದ ಡಾ.ದೀಪಕ್ ತಂಡ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ಸು ಸಾಧಿಸಿತು.

ಆಧುನಿಕ ರೋಬೋಟಿಕ್ ತಂತ್ರಜ್ಞಾನದಿಂದ ಅತಿ ನಿಖರವಾದ ಚಿಕಿತ್ಸಾ ಉಪಕರಣಗಳನ್ನು ಬಳಸಿ ಒಂದೇ ದಿನ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಈ ಚಿಕಿತ್ಸೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ನಡೆಯಿತು.

‘ಇಂತಹ ತಂತ್ರಜ್ಞಾನ ಬಳಕೆಯಿಂದ ರಕ್ತಸ್ರಾವ ಕಡಿಮೆಯಾಗಿದ್ದು, ಅತ್ಯಂತ ನಿಖರವಾಗಿ ಮರುಜೋಡಣೆ ಮಾಡಲಾಯಿತು. ಶಸ್ತ್ರಚಿಕಿತ್ಸೆ ನಂತರ ಕಡಿಮೆ ನೋವು ಹಾಗೂ ವೇಗದ ಚೇತರಿಕೆ ಕಂಡುಬಂದಿತು’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಮಧ್ಯ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರೈಕೆ ಆಸ್ಪತ್ರೆ ಈ ಸೇವೆ ಒದಗಿಸಿದೆ. ರೋಬೋಟಿಕ್ ಚಿಕಿತ್ಸೆಗೆ ಇನ್ನು ಮುಂದೆ ಬೇರೆಡೆಗೆ ಹೋಗುವ ಅಗತ್ಯವಿಲ್ಲ
ಡಾ.ಟಿ.ಜಿ. ರವಿಕುಮಾರ್ ಮುಖ್ಯಸ್ಥರು ಆರೈಕೆ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.