ಸಾಸ್ವೆಹಳ್ಳಿ: ಸಮೀಪದ ಕಮ್ಮಾರಗಟ್ಟೆ ಗ್ರಾಮದಲ್ಲಿ ಗರುಡ ಪಂಚಮಿಯಂದು ಕಾರಣಿಕ ನಡೆಯಿತು. ಐದು ದಿನಗಳ ಕಾಲ ಉಪವಾಸ ವ್ರತ ಆಚರಿಸಿದ ಕುಂಬಳೂರಿನ ಗಣಮಗ ದುಂಡ್ಯಪ್ಪ ಅವರು, ‘ಶಿಖರದ ತುದಿಗೆ ಘಟಸರ್ಪ ನುಂಗಿತಲೇ, ಭೂಲೋಕ ಎಚ್ಚರಲೇ’ ಎಂಬ ಭವಿಷ್ಯವಾಣಿಯನ್ನು ನುಡಿದರು. ನಾನಾ ಅರ್ಥದಲ್ಲಿ ಇದನ್ನು ವಿಶ್ಲೇಷಿಸಲಾಗಿದೆ.

‘ಶಿಖರದ ತುದಿಗೆ ಘಟಸರ್ಪ ನುಂಗಿತಲೇ ಎಂದರೆ ಮಳೆ ಹೆಚ್ಚಾಗಿ ಗುಡ್ಡಗಳು ಕುಸಿಯ ಬಹುದು, ಭೂಕಂಪಗಳಾಗಬಹುದು, ಭೂಲೋಕದಲ್ಲಿ ವಿಷಮ ಸ್ಥಿತಿ ಉಂಟಾಗಬಹುದು. ಹಲವು ತೊಂದರೆಗಳು ಉಂಟಾಗುತ್ತದೆ. ರಾಜಕೀಯವಾಗಿ, ಸರ್ಕಾರದ ಹಂತದಲ್ಲಿ ವಿಷಮ ಸ್ಥಿತಿ ಉಂಟಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಬಹುದು’ ಎನ್ನುತ್ತಾರೆ ಗ್ರಾಮದ ಬಸವರಾಜಪ್ಪ.

ಈ ಭವಿಷ್ಯವಾಣಿಗಾಗಿ ಮೈಸೂರಿನ ಅರಸರು ಕಾಯುತ್ತಿದ್ದರು. ಆದ್ದರಿಂದ ಇದು ಮಹತ್ವವನ್ನು ಪಡೆದಿದೆ ಎನ್ನುತ್ತಾರೆ ಮಲೆ ಕುಂಬಳೂರಿನ ಶೇಖರಪ್ಪ.

ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆಯ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ಸುತ್ತಮುತ್ತಲ ಗ್ರಾಮಗಳಾದ ಯಲೋದಹಳ್ಳಿ, ದಾಗಿನಕಟ್ಟೆ, ಸಿಂಗಟಗೆರೆ, ಕುಂಬಳೂರು, ಘಂಟ್ಯಾಪುರ, ತರಗನಹಳ್ಳಿ, ತಕ್ಕನಹಳ್ಳಿ, ಉಜ್ಜನಿಪುರ, ರೆಡ್ಡಿಹಳ್ಳಿ, ಅರಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ದೇವತೆಗಳು ಸಮಾವೇಶಗೊಂಡು ಅದ್ಧೂರಿ ಜಾತ್ರೆ ನಡೆಯಿತು.

ಬುಡಮೇಲಾದ ಹುಣಸೆಮರಕ್ಕೆ ನವದಂಪತಿ ಮಂಡಕ್ಕಿ ಎರಚಿ, ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಮಳೆ ಬಿಡುವು ನೀಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.