ದಾವಣಗೆರೆ: ಶಾಲೆಗಳ ಆರಂಭೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗಳು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿದ್ದು, ತರಗತಿ ಆರಂಭಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸಲಾಗಿದ್ದು, ಇನ್ನುಳಿದ ಶಾಲೆಗಳಿಗೆ ಶಾಲೆಗಳ ಆರಂಭಕ್ಕೂ ಮುನ್ನವೇ ಪೂರೈಸಲು ಸಿದ್ಧತೆ ನಡೆದಿದೆ.

ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ಪಠ್ಯಪುಸ್ತಕ ಹಾಗೂ 2 ಜೊತೆ ಸಮವಸ್ತ್ರಗಳನ್ನು ಪೂರೈಸಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಮಾಡಲಾಗಿದ್ದು, ಶಾಲೆಯವರು ಹಣ ಪಾವತಿಸಿ ಪಠ್ಯಪುಸ್ತಕಗಳನ್ನು ಇಲಾಖೆಯಿಂದಲೇ ಖರೀಸುತ್ತಿದ್ದಾರೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಶೇ 68.26ರಷ್ಟು ಹಾಗೂ ಖಾಸಗಿ ಶಾಲೆಗಳಿಗೆ ಶೇ 80.27 ಪಠ್ಯಪುಸ್ತಕಗಳು ಈಗಾಗಲೇ ಪೂರೈಕೆಯಾಗಿವೆ. ದಾವಣಗೆರೆ ದಕ್ಷಿಣ ಮತ್ತು ದಾವಣಗೆರೆ ಉತ್ತರ ವಲಯಗಳಿಗೆ ಮಾತ್ರ ಶೇ 20ರಷ್ಟು ಸಮವಸ್ತ್ರ ಪೂರೈಕೆಯಾಗಿವೆ. ಇನ್ನು 2–3 ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಲಯಗಳಿಗೂ ಸಮವಸ್ತ್ರ ಪೂರೈಸಲಾಗುವುದು ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು.

ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ವಿದ್ಯಾರ್ಥಿಗಳಿಗೆ ಒಟ್ಟು 19,22,416 ಪಠ್ಯಪುಸ್ತಕಗಳು ಅಗತ್ಯವಿದ್ದು, 13,12,311 ಪುಸ್ತಕಗಳು ಆಯಾ ಬಿಇಒ ಕಚೇರಿಗಳಿಗೆ ಪೂರೈಕೆಯಾಗಿವೆ. ಇನ್ನು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ 8,78,009 ಪುಸ್ತಕಗಳ ಬೇಡಿಕೆ ಇದ್ದು, ಈ ಪೈಕಿ 7,04,741 ಪುಸ್ತಕಗಳನ್ನು ಪೂರೈಸಲಾಗಿದೆ.

‘ಮೇ 29ರಂದು ಶಾಲೆ ಆರಂಭೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ಇದೆ. 27, 28ರಂದು ಶಾಲಾ ಆವರಣ ಹಾಗೂ ಕೊಠಡಿಗಳನ್ನು ಸ್ವಚ್ಛಗೊಳಿಸಲು ತೀರ್ಮಾನಿಸಿದ್ದೇವೆ. ಈ ವರ್ಷ ಸರ್ಕಾರದ ಆದೇಶದಂತೆ 5 ವರ್ಷ 5 ತಿಂಗಳು ಪೂರೈಸಿದ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲಾಗುವುದು. ಶೇ 50ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿದ್ದು, 29ರೊಳಗೆ ಶಾಲೆಗೆ ತಲುಪಿಸುವುದಾಗಿ ಬಿಇಒ ತಿಳಿಸಿದ್ದಾರೆ’ ಎಂದು ಚನ್ನಗಿರಿ ತಾಲ್ಲೂಕಿನ ಕೆಂಗಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಕ್ಷ್ಮಿನಾರಾಯಣ ಹೇಳಿದರು.

ಆಯಾ ತಾಲ್ಲೂಕುಗಳ ಕೇಂದ್ರ ಕಚೇರಿಗಳಿಗೆ ಬರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಲಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರೈಸುವ ಜವಾಬ್ದಾರಿಯನ್ನು ಬಿಇಒಗಳಿಗೆ ನೀಡಲಾಗಿದೆ. ಇದಕ್ಕಾಗಿ ಸರ್ಕಾರ ಸಾರಿಗೆ ವೆಚ್ಚವನ್ನೂ ಭರಿಸಲಿದ್ದು, ‘ಡಿ’ ದರ್ಜೆ ನೌಕರರು ಹಾಗೂ ಕಾರ್ಮಿಕರನ್ನು ಬಳಸಿಕೊಂಡು ಖಾಸಗಿ ವಾಹನಗಳಲ್ಲಿ ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಪೂರೈಸುವ ಕಾರ್ಯ ಭರದಿಂದ ಸಾಗಿದೆ.

ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಬ್ಯಾಂಕ್ನಲ್ಲಿ ಹಣ ಪಾವತಿಸಿದ ಚಲನ್ ಅನ್ನು ಬಿಇಒಗಳಿಗೆ ನೀಡಿ ಪಠ್ಯಪುಸ್ತಕಗಳನ್ನು ಪಡೆಯುತ್ತಿದ್ದಾರೆ. ಪುಸ್ತಕ ಮಳಿಗೆಗಳಿಂದ ಪಠ್ಯಪುಸ್ತಕಗಳ ಖರೀದಿಗೆ ಖಾಸಗಿ ಶಾಲೆ ಸೇರಿದಂತೆ ಯಾವುದೇ ಶಾಲೆಗಳಿಗೂ ಅವಕಾಶ ಇಲ್ಲ. ಖರೀದಿಸಲು ಮುಂದಾದರೂ ಎಲ್ಲಿಯೂ ಪಠ್ಯಪುಸ್ತಕಗಳ ಮಾರಾಟ ನಡೆಯುತ್ತಿಲ್ಲ.

ಖಾಸಗಿ ಶಾಲೆಗಳು ಪ್ರತ್ಯೇಕ ಸಮವಸ್ತ್ರ ಹೊಂದಲು ಅವಕಾಶ ಇರುವ ಕಾರಣಕ್ಕೆ, ಆಡಳಿತ ಮಂಡಳಿಯವರು ಸೂಚಿಸಿದ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಖರೀದಿಸುತ್ತಿದ್ದಾರೆ.

ಶಾಲಾ ಆರಂಭದ ಮೊದಲ 3 ದಿನ ವಿದ್ಯಾರ್ಥಿಗಳಿಗೆ ಸಿಹಿಯೂಟ ಬಡಿಸಲು ಶಿಕ್ಷಕರಿಗೆ ಇಲಾಖೆಯು ಸೂಚಿಸಿದೆ.

ಯಾವ ಶಾಲೆಗಳಲ್ಲಿ ಎಷ್ಟು ಶಿಕ್ಷಕರು?

ಜಿಲ್ಲೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1038 ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2863 ಹಾಗೂ ಪ್ರೌಢಶಾಲೆಗಳಲ್ಲಿ 1223 ಶಿಕ್ಷಕರಿದ್ದಾರೆ. ಅನುದಾನಿತ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 660 ಹಾಗೂ ಪ್ರೌಢಶಾಲೆಗಳಲ್ಲಿ 937 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅನುದಾನ ರಹಿತ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 3806 ಹಾಗೂ ಪ್ರೌಢಶಾಲೆಗಳಲ್ಲಿ 759 ಶಿಕ್ಷಕರು ಸೇವೆಯಲ್ಲಿದ್ದಾರೆ. ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಒಟ್ಟು 244 ಶಿಕ್ಷಕರು ಕೇಂದ್ರೀಯ ಶಾಲೆಗಳಲ್ಲಿ 25 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೇಡಿಕೆ ಸಲ್ಲಿಸಿದ ಪಠ್ಯಪುಸ್ತಕಗಳ ಪೈಕಿ ಶೇ 80ರಷ್ಟು ಪೂರೈಕೆ ಆಗಿದೆ. ಅವುಗಳನ್ನು ರೂಟ್ ಮ್ಯಾಪ್ ಪ್ರಕಾರ ಶಾಲೆಗಳಿಗೆ ತಲುಪಿಸುವ ಕಾರ್ಯ ನಡೆದಿದೆ. ಮೊದಲ ದಿನವೇ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಲು ಸೂಚಿಸಲಾಗಿದೆ.
ಜಿ.ಕೊಟ್ರೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.