ಶುಕ್ರವಾರ, ಫೆಬ್ರವರಿ 26, 2021
30 °C

ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ: ಹಾಜರಾತಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರು: ಸೋಮವಾರದಿಂದ 6ರಿಂದ 8ನೇ ತರಗತಿವರೆಗೆ ಶಾಲೆಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿದ್ದು, ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಉತ್ತಮವಾಗಿದೆ.

ಈವೆರೆಗೆ ನಡೆದ ವಿದ್ಯಾಗಮ ಕಾರ್ಯಕ್ರಮಕ್ಕೆ ಸೀಮಿತ ಸಂಖ್ಯೆಯ ಮಕ್ಕಳು ಬರುತ್ತಿದ್ದರು. ಈಗ ಪೂರ್ಣಾವಧಿ ತರಗತಿಗಳು ಆರಂಭವಾಗಿರುವ ಕಾರಣ ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 10ರಿಂದ 20ರಷ್ಟು ಏರಿಕೆಯಾಗಿದೆ.

ಮಕ್ಕಳಿಗೆ ಸ್ಯಾನಿಟೈಸರ್ ಹಾಕಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಶಾಲೆಗೆ ಬಿಡಲಾಯಿತು. ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಕೆಲವು ಶಾಲೆಗಳಲ್ಲಿ ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಲಾಗಿತ್ತು. ಮನೆಯಿಂದ ಊಟ, ಬಿಸಿನೀರು ತರುವಂತೆ ಮೊದಲೇ ಸೂಚಿಸಲಾಗಿತ್ತು. ಪಾಲಕರ ಒಪ್ಪಿಗೆ ಪತ್ರ ಪಡೆದು ಒಳಗೆ ಬಿಡಲಾಯಿತು. ಶಾಲೆಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೂ ಕಾರ್ಯ ನಿರ್ವಹಿಸಿದವು.

‘ವಿದ್ಯಾಗಮ ಇದ್ದಾಗ ಮಧ್ಯಾಹ್ನದವರೆಗೂ ತರಗತಿಗಳು ನಡೆಯುತ್ತಿದ್ದ ಸಮಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಬಂದಿದ್ದಾರೆ. 8ನೇ ತರಗತಿಯಲ್ಲಿ ಶೇ 70ರಷ್ಟು ಹಾಜರಾತಿ ಇದೆ.  ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ’ ಎಂದು ಹಿರಿಯ ಶಿಕ್ಷಕ ಮಹಾದೇವಪ್ಪ ತಿಳಿಸಿದರು.

‘ಹೆಚ್ಚಿನ ಸಮಯ ಸಿಕ್ಕಿರುವುದರಿಂದ ಕಷ್ಟಪಟ್ಟು ಓದಲು ಅನುಕೂಲವಾಗಿದೆ. ಮನೆಯಿಂದಲೇ ನೀರು ಹಾಗೂ ಊಟವನ್ನು ತರುತ್ತೇವೆ. ತರಗತಿಯಲ್ಲಿ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುತ್ತೇವೆ’ ಎನ್ನುತ್ತಾನೆ ವಿದ್ಯಾರ್ಥಿ ಭರತ್.

ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುವ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳ‌ಲ್ಲಿ 6ರಿಂದ 10ನೇ ತರಗತಿವರೆಗೆ ಶೇ 74.47ರಷ್ಟು ಹಾಜರಾತಿ ಇದ್ದು, 6ನೇ ತರಗತಿಯ‌ಲ್ಲಿ ಶೇ 75, 7ನೇ ತರಗತಿಯಲ್ಲಿ ಶೇ 76.51, 8ನೇ ತರಗತಿಯಲ್ಲಿ 70.62ರಷ್ಟು ಹಾಜರಾತಿ ಇತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು