ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ರಂದು ಹಾಲಸ್ವಾಮಿ ಮಠದಲ್ಲಿ ಮಹಾಶಿವರಾತ್ರಿ

Published 6 ಮಾರ್ಚ್ 2024, 7:01 IST
Last Updated 6 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಗೋವಿನಕೋವಿ (ನ್ಯಾಮತಿ): ಗ್ರಾಮದ ಹಾಲಸ್ವಾಮಿ ಮಠದಲ್ಲಿ ಮಾರ್ಚ್ 10ರಂದು ಮಹಾಶಿವರಾತ್ರಿ ಆಚರಣೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮಾರ್ಚ್ 10ರ ಸಂಜೆ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿ ನೇತೃತ್ವದಲ್ಲಿ ಹೋಮಪೂಜೆ, ಗುಳ್ಳಮ್ಮದೇವಿ ಮೂರ್ತಿಗೆ ಮಹಾರುದ್ರಾಭಿಷೇಕ, ಮಹಾಮಂಗಳಾರತಿ ನಂತರ ಜಾಗರಣೆ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 11ರ ಮುಂಜಾನೆ ಗ್ರಾಮದಲ್ಲಿ ಶ್ರೀಗಳವರ ಪಲ್ಲಕ್ಕಿ ಉತ್ಸವ ಜರುಗಿದ ನಂತರ ಶ್ರೀಗಳವರು ಕಾರಣೀಕವಾಣಿ ನುಡಿದ ನಂತರ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಹಾಲಸ್ವಾಮಿ ಸೇವಾ ಸಮಿತಿಯ ಗೌರವಾಧ್ಯಕ್ಷ ಎಚ್.ಫಾಲಾಕ್ಷಪ್ಪಗೌಡ, ಅಧ್ಯಕ್ಷ ಸಣ್ಣರಮೇಶ ಮತ್ತು ಕಾರ್ಯದರ್ಶಿ ವಿ.ಎಚ್.ರುದ್ರೇಶ, ಎ.ಸತೀಶ, ಜಿ.ವಿ.ರಮೇಶ, ಬಿ.ರಾಜಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT