ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ. 11ರಂದು ಸೂಳೆಕೆರೆ ಸಿದ್ಧೇಶ್ವರಸ್ವಾಮಿ ಕಾರ್ತಿಕೋತ್ಸವ

Published 7 ಡಿಸೆಂಬರ್ 2023, 14:22 IST
Last Updated 7 ಡಿಸೆಂಬರ್ 2023, 14:22 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಇತಿಹಾಸ ಪ್ರಸಿದ್ಧ ಸೂಳೆಕೆರೆ ಸಿದ್ಧೇಶ್ವರಸ್ವಾಮಿಯ ಕಾರ್ತಿಕೋತ್ಸವ ಡಿ. 11ರಂದು ಸಂಜೆ ನಡೆಯಲಿದೆ.

ಸೋಮವಾರ ಮುಂಜಾನೆ ಸೋಮಲಾಪುರದಿಂದ ಸಿದ್ಧೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಸಿದ್ಧೇಶ್ವರಸ್ವಾಮಿಯ ಸನ್ನಿಧಿಗೆ ಬರಮಾಡಿಕೊಂಡು ಪೂಜೆ ಸಲ್ಲಿಸಲಾಗುವುದು. ಸಂಜೆ ಗೋಧೂಳಿ ಮುಹೂರ್ತದಲ್ಲಿ ಸೂಳೆಕೆರೆಯಲ್ಲಿ ಗಂಗಾಪೂಜೆ ನಡೆಸಿ ಬಾಗಿನ ಅರ್ಪಿಸಿ, ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಸಲಾಗುತ್ತದೆ.

ನಂತರ ಪೂರ್ಣಕುಂಭಗಳೊಂದಿಗೆ ದೇಗುಲಕ್ಕೆ ಬಂದು ಕದಳಿ ಮಂಟಪದಲ್ಲಿ ಪೂಜೆ ಸಲ್ಲಿಸಿ 1001 ದೀಪಗಳನ್ನು ಬೆಳಗಿಸಲಾಗುತ್ತದೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಸ್‌.ಬಸವಂತಪ್ಪ, ಶಿವಗಂಗಾ ಬಸವರಾಜು, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್‌, ತಹಶೀಲ್ದಾರ್‌ ಎರ್ರಿಸ್ವಾಮಿ, ಸಿಪಿಐ ಪ್ರಶಾಂತ್‌ ಮುನ್ನೋಳಿ, ಜಾನಪದ ವಿದ್ವಾಂಸ ಶಂಭು ಬಳಿಗಾರ್‌, ಸಾಹಿತಿ ಎಸ್‌.ಟಿ.ಶಾಂತಗಂಗಾಧರ, ದಾವಣಗೆರೆ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಭಾಗವಹಿಸಲಿದ್ದರಾರೆ.

ಗುಳದಳ್ಳಿ ಬಸವನಗೌಡ ತಂಡದವರಿಂದ ಡೊಳ್ಳು ಕುಣಿತ, ಬಾತಿ ರೇವಣಪ್ಪ ತಂಡದವರಿಂದ ರೇವಣಸಾಂಗತ್ಯ ಪ್ರವಚನ, ಹರಳಹಳ್ಳಿ ಶೇಖರಪ್ಪ ತಂಡದವರಿಂದ ತಮಟೆ ವಾದನ, ನಂತರ ಮಹಾ ಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.

ಡಿ. 12ರಂದು ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ಸಿದ್ಧೇಶ್ವರಸ್ವಾಮಿಗೆ ರುದ್ರಾಭಿಷೇಕ, ಕುಂಭೋತ್ಸವ, ಶಾಂತಮ್ಮದೇವಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನಡೆಯಲಿದೆ ಎಂದು ದೇಗುಲದ ಅರ್ಚಕ ಚಂದ್ರಶೇಖರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT