ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ‘ಕೌಶಲ ಪಡೆಯಲು ಪ್ರಾಯೋಗಿಕಾನುಭವ ಅವಶ್ಯ’

Last Updated 26 ಜೂನ್ 2022, 4:18 IST
ಅಕ್ಷರ ಗಾತ್ರ

ದಾವಣಗೆರೆ: ಪದವಿಯಿಂದ ಜ್ಞಾನ ಪಡೆಯಬಹುದು. ಕೌಶಲ ಪಡೆಯಲು ಪ್ರಾಯೋಗಿಕಾನುಭವ ಅವಶ್ಯ. ಹಾಗಾಗಿ ನೂತನ ಶಿಕ್ಷಣ ನೀತಿಯು ಕೌಶಲಕ್ಕೆ ಮಹತ್ವ ಕೊಟ್ಟಿದೆ ಎಂದು ಅಂತರರಾಷ್ಟ್ರೀಯ ವ್ವಕ್ತಿತ್ವಾಭಿವೃದ್ಧಿ ತರಬೇತುದಾರ ಆರ್.ಎ. ಚೇತನ್ ರಾಮ್ ಅಭಿಪ್ರಾಯಪಟ್ಟರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ ಬಿಸಿಎ ಮತ್ತು ಬಿಕಾಂ ಪದವಿ ಪ್ರದಾನ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಕಾರಾತ್ಮಕ ಬದಲಾವಣೆಯು ನಿರಂತರವಾಗಿರಬೇಕು. ಅದುವೇ ನಿಜವಾದ ಪರಿವರ್ತನೆ. ಜ್ಞಾನವೇ ಶಕ್ತಿಯಾದರೂ ಪರಿವರ್ತನೆಗೆ ಕೌಶಲವೂ ಅವಶ್ಯ. ಪದವಿ ಗಳಿಕೆಯು ಜೀವನದ ಸಾಧನೆಯ ಕೊನೆಯಲ್ಲ. ಇದು ಆರಂಭವಷ್ಟೇ ಎಂದರು.

‘ನಾವೂ ಬದುಕ ಬೇಕು, ಉಳಿದವರಿಗೂ ಬದುಕಲು ಬಿಡಬೇಕು. ನಾವಷ್ಟೇ ಸಂತೋಷವಾಗಿದ್ದರೆ ಸಾಲದು, ಇತರರೂ ಸಂತೋಷವಾಗಿರುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣ, ‘ನೈಜ ಅನುಭವದೊಂದಿಗೆ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಅವಕಾಶಗಳು ಲಭ್ಯವಾಗಲಿವೆ’ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಬಿ.ವೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಫ್ರೊ.ಡಿ.ಎಂ. ಸ್ವಾತಿ ಸ್ವಾಗತಿಸಿದರು. ಫ್ರೊ.ಕೆ.ಎಸ್. ಮುನವಳ್ಳಿ ಮಠ್ ಹಾಗೂ ಫ್ರೊ.ಕೆ.ಸಿಧ್ಧಲಿಂಗಯ್ಯಸಿಧ್ಧಲಿಂಗಪ್ಪ ಪರಿಚಯ ಮಾಡಿದರು. ಫ್ರೊ.ಕೆ.ವೈ. ವೀರೇಂದ್ರ ಪ್ರತಿಜ್ಞಾವಿಧಿ ಬೋಧಿಸಿದರು. ದರ್ಶನ್, ಅನುಷಾ, ಅಭಿಷೇಕ್ ಮತ್ತು ನಯನಾ ಕಾರ್ಯಕ್ರಮ ನಿರೂಪಿಸಿದರು. ಸಂಧ್ಯಾ ಮತ್ತು ಸಂಗಡಿಗರು ಆರಂಭಗೀತೆ ಹಾಡಿದರು. ಫ್ರೊ.ಎಲ್.ಎನ್. ಚೇತನಾ ವಂದಿಸಿದರು. ಎಂಬಿಎ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT