ಪೋಸ್ಟರ್ ಗಮ್‌ಗೆ ಅಂಟಿಕೊಂಡ ಹಾವಿನ ರಕ್ಷಣೆ

ದಾವಣಗೆರೆ: ಇಲ್ಲಿನ ವಿಶ್ವೇಶ್ವರಯ್ಯ ಉದ್ಯಾನದಲ್ಲಿ ಶುಕ್ರವಾರ ಗೋಡೆಗೆ ಪೋಸ್ಟರ್ ಅಂಟಿಸಲು ಪೇಪರ್ ಮೇಲಿಟ್ಟಿದ್ದ ಗಮ್‌ಗೆ ಹಾವೊಂದು ಅಂಟಿಕೊಂಡು ಒದ್ದಾಡಿದ್ದು, ಉರಗ ರಕ್ಷಕ ಪ್ರದೀಪ್ ಹಾವನ್ನು ರಕ್ಷಿಸಿದ್ದಾರೆ.
ಗಮ್‍ಗೆ ಅಂಟಿಕೊಂಡ ಹಾವು ಮುಂದೆ ಹೋಗಲು ಆಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಉರಗತಜ್ಞರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಉರಗ ರಕ್ಷಕ ಪ್ರದೀಪ್ ಹಾವನ್ನು ರಕ್ಷಣೆ ಮಾಡಿದರು. ಹಾವನ್ನು ರಕ್ಷಣೆ ಮಾಡಿದ ವಿಡಿಯೊ ಹರಿದಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.