ಬುಧವಾರ, ಆಗಸ್ಟ್ 10, 2022
20 °C
ಕೆಲಸದಿಂದ ಅಮಾನತು: ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ಕೆಲಸದಿಂದ ಅಮಾನತು: ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹಣ ದುರ್ಬಳಕೆ ಆರೋಪ ಹೊರಿಸಿ ಅಮಾನತು ಮಾಡಿದ್ದರಿಂದ ನೊಂದುಕೊಂಡು ಶ್ಯಾಗಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಬಿ.ಎನ್. ಚಂದ್ರಪ್ಪ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಒಂದು ವರ್ಷದಿಂದ ಅವರಿಗೆ ಬರಬೇಕಾದ ಸಂಬಳ ಕೊಟ್ಟಿಲ್ಲ. ಸಂಬಳ ಮಂಜೂರು ಮಾಡಲು ₹1 ಲಕ್ಷವನ್ನು  ಸಹಕಾರ ಸಂಘಗಳ ಕಚೇರಿಯಲ್ಲಿನ ಉಪನಿಬಂಧಕರ ಕಚೇರಿಯ ಗುಮಾಸ್ತ ಹಾಗೂ ‘ಡಿ’ ದರ್ಜೆಯ ನೌಕರರು ಲಂಚ ಕೇಳಿದ್ದರು. ₹20 ಸಾವಿರ ಹೊಂದಿಸಿ ಕೊಟ್ಟರೂ ಸಂಬಳ ಕೊಡದೆ ಹಣ ದುರ್ಬಳಕೆ ಆರೋಪದ ಮೇಲೆ ಕೆಲವರ ಚಿತಾವಣೆಯಿಂದ ನನ್ನನ್ನು ಅಮಾನತು ಮಾಡಲಾಯಿತು. ಸಂಬಳವಿಲ್ಲದೆ ಸಂಸಾರ ನೆಡೆಸುವುದು ಕಷ್ಟವಾಗಿ, ಬೇರೆ ದಾರಿ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಪತ್ರದಲ್ಲಿ ಬರೆದಿಟ್ಟು ಸಾವನ್ನಪ್ಪಿದ್ದಾರೆ.

ಹದಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ತನಿಖೆ ನೆಡೆಯುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.