ದಾವಣಗೆರೆ: ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಬೆಂಗಳೂರು-ಧಾರವಾಡ ಸಿದ್ಧಗಂಗಾ ಇಂಟರ್ ಸಿಟಿ ರೈಲು ಇಲ್ಲಿನ ರೈಲು ನಿಲ್ದಾಣದಿಂದ ಒಂದೂವರೆ ಗಂಟೆ ವಿಳಂಬವಾಗಿ ಹೊರಟಿತು.

ನಿಗದಿತ ಸಮಯ 6.20ಕ್ಕೆ ದಾವಣಗೆರೆ ರೈಲು ನಿಲ್ದಾಣಕ್ಕೆ ಬಂದ ರೈಲು 6.25ಕ್ಕೆ ಹೊರಡಬೇಕಿತ್ತು. ಆದರೆ, ಆ ವೇಳೆಗೆ ತಾಂತ್ರಿಕ ದೋಷದಿಂದ ಎಂಜಿನ್ ಚಾಲನೆ ಆಗಲಿಲ್ಲ.

55 ನಿಮಿಷಗಳ ಕಾಲ ರೈಲ್ವೆ ಅಧಿಕಾರಿಗಳು ಪ್ರಯತ್ನಿಸಿದರೂ ಎಂಜಿನ್ ಚಾಲು ಆಗಿಲ್ಲ. ಕೊನೆಗೆ ಸಂಜೆ 7.20ಕ್ಕೆ ಹರಿಹರದಿಂದ ಮತ್ತೊಂದು ಎಂಜಿನ್ ತಂದು ಜೋಡಿಸಿದ ಬಳಿಕ 7.25ಕ್ಕೆ ದಾವಣಗೆರೆಯಿಂದ ರೈಲು ಹೊರಟಿತು. ಒಂದೂವರೆ ಗಂಟೆ ಕಾಲ ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ಕಾಲ ಕಳೆಯಬೇಕಾಯಿತು. ಸಕಾಲಕ್ಕೆ ಊರಿಗೆ ತಲುಪಲಾಗದೇ ಪರದಾಡುವಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.