ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಾಗಣಪತಿ ವಿಸರ್ಜನೆ

Last Updated 6 ಸೆಪ್ಟೆಂಬರ್ 2020, 2:53 IST
ಅಕ್ಷರ ಗಾತ್ರ

ದಾವಣಗೆರೆ: ಹೈಸ್ಕೂಲ್‌ ಮೈದಾನದಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನೆ ಡಿಜೆ, ಬ್ಯಾಂಡ್‌ಸೆಟ್, ಜಾನಪದ ಕಲಾತಂಡ, ನಾದಸ್ವರಗಳಿಲ್ಲದೇ ಟ್ರ್ಯಾಕ್ಟರ್‌ನಲ್ಲಿ ಸರಳ ಮೆರವಣಿಗೆ ಮೂಲಕ ಮಾಡಲಾಯಿತು.

ಕಳೆದ ವರ್ಷದ ರೀತಿಯಲ್ಲಿಯೇ ಈ ವರ್ಷವೂ ಗಣಪತಿ ವಿಗ್ರಹದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಸಮಿತಿಯವರು ಒತ್ತಾಯಿಸಿದರು. ಸರ್ಕಾರದ ನಿಯಮ ತಿಳಿಸಿ ಎಸ್‌ಪಿ ಹನುಮಂತರಾಯ ಮನವೊಲಿಸಿದರು.

‘ಸರ್ಕಾರದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಪೊಲೀಸರು ಸಹಕಾರ ನೀಡುತ್ತಿದ್ದಾರೆ. ಮೆರವಣಿಗೆಯಲ್ಲಿ ಯಾರೂ ಬರಬಾರದು. ವಿಸರ್ಜನೆ ನಡೆಯುವ ಬಾತಿಗೆ ಬರಲು ಆಸಕ್ತಿ ಇರುವವರು ನೇರವಾಗಿ ಅಲ್ಲಿಗೇ ಹೋಗಿ’ ಎಂದು ಕೆ.ಬಿ. ಶಂಕರನಾರಾಯಣ ಮನವಿ ಮಾಡಿಕೊಂಡರು.

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜೊಳ್ಳಿಗುರು, ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ. ಶಿವಯೋಗಿಸ್ವಾಮಿ, ಶಿವಗಂಗಾ ಬಸವರಾಜ್‌, ರಾಘವೇಂದ್ರ, ಎಸ್‌.ಟಿ. ವೀರೇಶ್‌, ಶ್ರೀನಿವಾಸ ದಾಸ್‌ಕರಿಯಪ್ಪ ಮುಂತಾದವರು ಪೂಜೆ ಸಲ್ಲಿಸಿದ ಬಳಿಕ ಗಣೇಶ್ ವಿಗ್ರಹವನ್ನು ವಿಸರ್ಜನೆಗೆ ಒಯ್ಯಲಾಯಿತು. ಎವಿಕೆ ರಸ್ತೆ, ಜಯದೇವ ಸರ್ಕಲ್‌, ಅಶೋಕ ರಸ್ತೆ, ಪಿ.ಬಿ. ರೋಡ್‌ಗಾಗಿ ಬಾತಿಗೆ ಹೋಗಿ ವಿಸರ್ಜನೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT